ಡಾ. ಅಂಬೇಡ್ಕರ ಪುಣ್ಯಭೂಮಿ ದಾದರ ಗೆ 10 ನೇ ಬಾರಿಗೆ ಪ್ರಯಾಣ. ಸುರೇಶ ರಾಯಪ್ಪಗೋಳ

Dr. 10th tDr. 10th trip to Ambedkar Punyabhoomi Dadar. Suresh Rayappagolarip to Ambedkar Punyabhoomi

ಡಾ. ಅಂಬೇಡ್ಕರ ಪುಣ್ಯಭೂಮಿ ದಾದರ ಗೆ 10 ನೇ ಬಾರಿಗೆ  ಪ್ರಯಾಣ. ಸುರೇಶ ರಾಯಪ್ಪಗೋಳ 

ನೇಸರಗಿ 05: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಪುಣ್ಯತಿಥಿಯು ಶುಕ್ರವಾರ 06-12-2024 ರಂದು ನೆರವೇರುವ ಪ್ರಯುಕ್ತ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರ ) ಅಂಬೇಡ್ಕರ್ ಧ್ವನಿ ಬೆಂಗಳೂರು ಸಂಘಟನೆ ಮೂಲಕ  ಸತತವಾಗಿ 10 ವರ್ಷದ  ಮುಂಬೈ ನಗರದ ದಾದರ ನ ಡಾ. ಬಿ ಆರ್ ಅಂಬೇಡ್ಕರ ಅವರ ಸಮಾಧಿ ಸ್ಥಳ ಗೋಪುರಕ್ಕೆ ಸಂಘಟನೆ ಸಂಸ್ಥಾಪಕ ಅಧ್ಯಕ್ಷರಾದ ಸುರೇಶ ಕೆ. ರಾಯಪ್ಪಗೋಳ ಅವರ ನೇತೃತ್ವದಲ್ಲಿ ತಾಲೂಕಿನ ನೇಸರಗಿ ಗ್ರಾಮದಿಂದ ಪ್ರಯಾಣ ಬೆಳೆಸಲಾಯಿತು.   

 ಈ ಸಂದರ್ಭದಲ್ಲಿ  ಡಿ ಎಸ್ ಎಸ್ ರಾಜ್ಯಾಧ್ಯಕ್ಷರಾದ ಸುರೇಶ ರಾಯಪ್ಪಗೋಳ ಮಾತನಾಡಿ ನಾಳೆಯ ದಿನ ಬಹಳ ಪವಿತ್ರವಾದ ದಿನವಾಗಿದ್ದು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪುಣ್ಯ ಭೂಮಿ ಮುಂಬೈನ ದಾದರ ಪಟ್ಟಣದ ಗೋಪುರಕ್ಕೆ ಕಳೆದ 9 ವರ್ಷಗಳಿಂದ ನಮ್ಮ ಸಂಘಟನೆ ವತಿಯಿಂದ ಯಾತ್ರೆ ಮಾಡಿ 10 ನೇ ವರ್ಷಕ್ಕೆ ಈಗ ಪ್ರಯಾಣ ಬೆಳೆಸುತ್ತಿರುವದು ಹೆಮ್ಮೆಯ ಅನಿಸುತ್ತಿದ್ದು, ನಾಳೆ ಲಕ್ಷಾಂತರ ಜನ ಡಾ. ಅಂಬೇಡ್ಕರ್ ಸಮಾಧಿಗೆ ಬೇಟಿ ನೀಡಿ ನಮನ ಸಲ್ಲಿಸುತ್ತಾರೆ ಎಂದರು.   

   ಈ ಯಾತ್ರೆಯಲ್ಲಿ ರೇಣುಕಾ ಸುರೇಶ. ರಾಯಪ್ಪಗೋಳ,ದ್ಯಾನೇಶ್ವರ ರಾಯಪ್ಪಗೋಳ, ಸುರೇಶ ದೇಮಾಪುರ, ಭಾರತಿ ರಾಯಪ್ಪಗೋಳ, ಸೋಮಪ್ಪ ಹರಿಜನ, ವಿನೋದ ಮಾದಿಗರ, ಕೃಷ್ಣ ರಾಯಪ್ಪಗೋಳ, ಪ್ರವೀಣ ಯಲ್ಲಪ್ಪಣ್ಣವರ, ಸಚಿನ ಕಾಂಬಳೆ, ಪ್ರಕಾಶ ಕಾಂಬಳೆ ಸೇರಿದಂತೆ ಅನೇಕರು ಪ್ರಯಾಣ ಬೆಳೆಸಿದರು.