ಹಾವೇರಿ10: ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕನರ್ಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಜ್ಞಾನಗಂಗಾ ಶಿಕ್ಷಣ ಸಮಿತಿಯ ಚನ್ನಬಸಪ್ಪ ಮಾಗಾವಿ ಪ್ರೌಢಶಾಲೆಯಲ್ಲಿ ಜರುಗಿದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಸೋಮವಾರ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಕಾರ್ಯದಶರ್ಿ ಶ್ರೀಮತಿ ಕೆ.ಶ್ರೀವಿದ್ಯಾ ಅವರು ಚಾಲನೆ ನೀಡಿದರು.
ಅಪರ ಜಿಲ್ಲಾಧಿಕಾರಿ ವಿನೋದಕುಮಾರ ಹೆಗ್ಗಳಗಿ, ಅರಣ್ಯ ಇಲಾಖೆ ಅಶೋಕ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೆಶಕ ಅಂದಾನೆಪ್ಪ ವಡಗೇರಿ, ಪರಿಸರ ಅಧಿಕಾರಿ ಎಂ.ಎಸ್.ಮಹೇಶ್ವರಪ್ಪ, ಸಹಾಯಕ ಪರಿಸರ ಅಧಿಕಾರಿ ಪಿ.ರಾಜೇಶ, ಜ್ಞಾನಗಂಗಾ ಶಿಕ್ಷಣ ಸಮಿತಿ ಕಾರ್ಯದಶರ್ಿಗಳಾದ ಕೃಷ್ಣ ಮಂಗಳೂರ, ಸಂಜೀವ ಬಂಕಾಪುರ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯ ಹನುಮಂತಗೌಡ ಗೊಲ್ಲರ ಇತರರು ಉಪಸ್ಥಿತರಿದ್ದರು.ಅ
ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾಥರ್ಿಗಳು ಪರಿಸರ ಕಾಳಜಿಯುಳ್ಳ "ತಡೆಯಿರಿ ಮಾಲಿನ್ಯ, ಉಳಿಸಿರಿ ಜೀವ ಸಂಕುಲ", "ಕಾಡು ಬೆಳೆಸ ಬಣ್ಣಿ ನಮ್ಮ ನಾಡು ಉಳಿಸಬಣ್ಣಿ" ಹಾಗೂ ಇಂಗಿಸಿ ಮಳೆ ಹೆಚ್ಚಿಸಿ ಅಂತರ್ಜಲ ಎಂಬ ಘೋಷವಾಕ್ಯಗಳನ್ನು ಕೂಗಿದರು.