ಸ್ಟೂಡೆಂಟ್ ಪೊಲೀಸ್ ಕೆಡೆಟ್ ಗೆ ಚಾಲನೆ

ಹಾವೇರಿ: ಪೊಲೀಸ್ ಇಲಾಖೆ ಕಾಯ್ದೆ ಕಾನೂನುಗಳ ಕುರಿತಾಗಿ ಅರಿವನ್ನು ತಿಳಿಸುತ್ತದೆ, ಅದನ್ನು ಸಕರ್ಾರಿ ಶಾಲೆಗಳಿಗೂ ವಿಸ್ತರಿಸಿ ಮಕ್ಕಳಿಗೆ ತರಬೇತಿ ನೀಡಬೇಕು ಎಂದು ಸಿದ್ಧಾರೂಢ ಬಡಿಗೇರ ಹೇಳಿದರು. 

   ತಾಲೂಕಿನ ಬಸಾಪುರ ಗ್ರಾಮದ ಸಕರ್ಾರಿ ಪ್ರೌಢ ಶಾಲೆಯಲ್ಲಿ ರವಿವಾರ ಗುತ್ತಲ ಪೋಲೀಸ್ ಠಾಣೆಯ ಪಿಎಸ್ಐ ಸಿದ್ದಾರೂಢ ಬಡಿಗೇರ ಅವರು 'ಸ್ಟೂಡೆಂಟ್ ಪೊಲೀಸ್ ಕೆಡಿಟ್ ಕಾರ್ಯಕ್ರಮ'ಕ್ಕೆ ಚಾಲನೆ ನೀಡಿ ಮಾತನಾಡಿದರು. 

     ಸಮಾಜದ ಪ್ರಜ್ಞಾವಂತ ಜನ ಸಾಮಾನ್ಯರಿಗೆ ಪೋಲೀಸ್ ಇಲಾಖೆಯು ಕಾಯ್ದೆ ಕಾನೂನುಗಳ ಕುರಿತು ಜಾಗೃತಿ ಮೂಡಿಸುತ್ತದೆ. ಅಂತಹ ಮಾಹಿತಿಯನ್ನು ಸರಕಾರ ಶಾಲೆಗಳಿಗೂ ವಿಸ್ತರಿಸಿ ಮಕ್ಕಳಿಗೆ ತರಬೇತಿ ನೀಡುತ್ತಿರುವುದು ಒಳ್ಳೆಯ ವಿಚಾರವೇ ಸರಿ ಎಂದು ಹೇಳಿದರು. 

       ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಡಾ. ಗೀತಾ ಸುತ್ತಕೋಟಿಯವರು ಪ್ರಾಸ್ತಾವಿಕ ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಶಿಸ್ತು ಅಷ್ಟೇ ಮುಖ್ಯ, ಗುಣಮಟ್ಟದ ಶಿಕ್ಷಣ ಶಿಸ್ತು ಸಾಧನೆಗೆ ಮೆಟ್ಟಿಲು ಎಂದು ಹೇಳಿದರು. 

      ಅದೇ ರೀತಿಯಾಗಿ ಜಿಲ್ಲಾ ಕುರುಬ ಸಂಘದ ಅಧ್ಯಕ್ಷರಾದ ಬಸವರಾಜ ಕಂಬಳಿಯವರು ಬಸಾಪುರ ಗ್ರಾಮದಿಂದ ಪ್ರೌಢ ಶಾಲೆ ಸುಮಾರು 2 ಕಿಮೀ ದೂರ ಇರುವುದರಿಂದ ವಿದ್ಯಾಥರ್ಿಗಳಿಗೆ ಯಾವುದೇ ತೊಂದರೆ ಆಗದಂತೆ ಹಾಗೂ ಅಹಿತಕರ ಘಟನೆ ಸಂಭವಿಸದಂತೆ ವಾರಕ್ಕೆ ಒಂದು ಸಲ ಶಾಲೆಗೆ ಭೇಟಿ ನೀಡಬೇಕೆಂದು ಪೊಲೀಸರಲ್ಲಿ ವಿನಂತಿಸಿಕೊಂಡರು. 

        ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಉಪಾಧ್ಯಕ್ಷರಾದ ಮಹಾದೇವಪ್ಪ ತಳವಾರ, ಬಸವರಾಜ ಚಾವಡಿ, ಬೀರಪ್ಪ ಕನವಳ್ಳಿ, ಶಂಕ್ರಪ್ಪ, ನಾಗಪ್ಪ ಬಂಡಿವಡ್ಡರ, ಶಿವಾನಂದ ಜಾಡರ, ಮೃತ್ಯುಂಜಯ ಸಿದ್ದಾಳ ಸೇರಿದಂತೆ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜಬಿವುಲ್ಲಾ ಖಾಜಿ ನಿರೂಪಿಸಿ, ವಿಜಯಕುಮಾರ್ ಕಮದೋಡ ಸ್ವಾಗತಿಸಿ, ಪಾರ್ವತಿ ಪಾಟೀಲ್ ವಂದಿಸಿದರು.