ಬಹು ಬೇಡಿಕೆಯ ಜವಳಿ ಉದ್ಯಮದಲ್ಲಿ ತೊಡಗಿಕೊಂಡರೆ ಉತ್ತಮ ಜೀವನ ಸಾಧ್ಯ: ಪ್ರಭುದೇವ

ಹಾವೇರಿ:  ದೇಶದಲ್ಲಿ ಜವಳಿ ಮತ್ತು ಕೃಷಿ ಉದ್ಯಮಕ್ಕೆ ಸಮಾನವಾದ ಅವಕಾಶಗಳಿವೆ. ಬಹು ಬೇಡಿಕೆಯ ಜವಳಿ ಉದ್ಯಮದಲ್ಲಿ ತೊಡಗಿಸಿಕೊಂಡರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಅಗ್ರಣೀಯ ಬ್ಯಾಂಕಿನ ವ್ಯವಸ್ಥಾಪಕರಾದ ಎನ್.ಜಿ.ಪ್ರಭುದೇವ ಅವರು ಕರೆ ನೀಡಿದರು.

ಡಿ.ದೇವರಾಜ ಅರಸು ಭವನದಲ್ಲಿ ಶನಿವಾರ ಜಿಲ್ಲಾ ಪಂಚಾಯತ್, ಕೈಮಗ್ಗ ಮತ್ತು ಜವಳಿ ಇಲಾಖೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಆಯೋಜಿಸಿದ ನೂತನ ಜವಳಿ ನೀತಿಯಡಿ ಉದ್ಯಮ ಶೀಲತಾ ಅಭಿವೃದ್ಧಿ ಕಾಯರ್ಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜವಳಿ ಉದ್ಯಮಕ್ಕಾಗಿ ಪಡೆದ ಸಾಲ ಮತ್ತು ಸಹಾಯಧನವನ್ನು ಪ್ರಾಮಾಣಿಕವಾಗಿ ಬಳಸಿಕೊಂಡು ಯಶಸ್ವಿ ಉದ್ಯಮಿಯಾಗಿ ಬೆಳೆಯುವಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಕರೆ ನೀಡಿದ ಅವರು ಈ ಉದ್ಯಮದಲ್ಲಿ ತೋಡಗಿಸಿಕೊಳ್ಳುವ ಫಲಾನುಭವಿಗಳಿಗೆ ನೂತನ ಜವಳಿ ನೀತಿಯಡಿ ಉದ್ಯಮದಾರರಿಗೆ ದೊರಕುವ ಸೌಲಭ್ಯಗಳ ಮಾಹಿತಿ ನೀಡಲು ಕಾಯರ್ಾಗಾರವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಕನರ್ಾಟಕ ರಾಜ್ಯ ಹಣಕಾಸು ಸಂಸ್ಥೆಯ ಅಧಿಕಾರಿ ದಯಾನಂದ ಅವರು ಮಾತನಾಡಿ, ಕೈಗಾರಿಕೆಗಳ ಅಭಿವೃದ್ಧಿ ಹಾಗೂ ಜವಳಿ ಉದ್ಯಮಿಗಳಿಗೆ ರಾಜ್ಯ ಹಣಕಾಸು ಸಂಸ್ಥೆಯಿಂದ ನೆರವು ನೀಡಲಾಗುತ್ತಿದೆ. ಫಲಾನುಭವಿಗಳು ಇದರ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡರು.

ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿದರ್ೆಶಕ ವಾಸುದೇವ ದೊಡ್ಡಮನಿ ಅವರು ಮಾತನಾಡಿ, ರಾಣೇಬೆನ್ನೂರಿನ ಕಂಬಳಿ ಉತ್ಪಾದನಾ ಘಟಕ ಹಾವೇರಿ ಜಿಲ್ಲೆಯಲ್ಲಿ ಮಂಚೂಣಿಯಲ್ಲಿದೆ. ಜಿಲ್ಲೆಯಲ್ಲಿ ಐದರಿಂದ ಹತ್ತು ಜವಳಿ ಘಟಕಗಳ ಸ್ಥಾಪನೆಯ ಉದ್ದೇಶವನ್ನು ಇಲಾಖೆ ಹೊಂದಿದೆ. ಆಸಕ್ತರು ಸಕರ್ಾರದ ನೆರವು ಪಡೆದು ಜವಳಿ ಘಟಕ ಸ್ಥಾಪನೆಗೆ ಮುಂದಾದರೆ ಇಲಾಖೆಯಿಂದ ಎಲ್ಲ ನೆರವನ್ನು ಒದಗಿಸಲಾಗುವುದು ಎಂದು ಹೇಳಿದರು.

ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಿ.ಪಂ.ಸದಸ್ಯೆ ಶ್ರೀಮತಿ ನೀಲವ್ವ ಚವ್ಹಾಣ ಕಾಯರ್ಾಗಾರವನ್ನು ಉದ್ಘಾಟಿಸಿದರು. ತಾ.ಪಂ.ಅಧ್ಯಕ್ಷ ಕರಿಯಪ್ಪ ಮಲ್ಲಪ್ಪ  ಉಂಡಿ, ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿದರ್ೆಶಕ ದರೇಗೌಡ, ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿದರ್ೆಶಕ ವಿನಾಯಕ ಜೋಶಿ, ಕ್ಲಬ್ ಸಿಟಿ ನಿದರ್ೆಶಕ ರವೀಂದ್ರ ಇತರರು ಉಪಸ್ಥಿತರಿದ್ದರು.