ಬಸವತತ್ವ ಮೌಲ್ಯ ಅಳವಡಿಸಿಕೊಳ್ಳುವಲ್ಲಿ ವಿಫಲ: ಮಹಾಂತ ಶ್ರೀಗಳು

ಲೋಕದರ್ಶನವರದಿ

ಹಾವೇರಿ : ಬಸವತತ್ವಗಳನ್ನು ಆಚರಿಸುತ್ತೇವೆ ಎಂದು ಶಫಥ ಮಾಡುತ್ತೇವೆಯೇ ಹೊರತು ಬಸವತತ್ವಗಳಲ್ಲಿರುವ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ ಎಂದು ಸವಣೂರಿನ ಕಲ್ಮಠದ ಮಹಾಂತ ಶ್ರೀಗಳು ಹೇಳಿದರು. 

         ಹೊಸಮಠದ ಬಸವ ಕೇಂದ್ರದಲ್ಲಿ ಜರುಗುತ್ತಿರುವ ಲಿಂ. ಜಗದ್ಗುರು ಶ್ರೀ. ನೈಘಂಟಿನ ಸಿದ್ದಬಸವ ಮುರುಘರಾಜೇಂದ್ರ ಶ್ರೀಗಳ ಹಾಗೂ ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳವರ ಸ್ಮರಣೋತ್ಸವ ನಿಮಿತ್ಯ ಶರಣ ಸಂಸೃತಿ ಉತ್ಸವ-2019 ಪ್ರಯುಕ್ತ ಕಾಗಿನೆಲೆ ರಸ್ತೆಯಲ್ಲಿರುವ ಮುರುಘಾಮಠದಲ್ಲಿ ಬಸವತತ್ವ ದ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು. 

         ಹಲವು ಮಠಗಳಲ್ಲಿ ಲಕ್ಷ ದೀಪೋತ್ಸವದಂತಹ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಎಣ್ಣೆಯನ್ನು ನಿರರ್ಥಕ ಮಾಡುತ್ತಿರುವುದನ್ನು ನೋಡಿದ್ದೇವೆ. ಹೀಗೆ ಮಾಡುವುದರಿಂದ ರೈತರ ಶ್ರಮ ಪಟ್ಟು ಬೆಳೆದ ಬೆಳೆಗಳಿಗೆ ಗೌರವ ನೀಡಿದಂತಾಗುವುದಿಲ್ಲ. ಅದರ ಬದಲು ಹಸಿದವರಿಗೆ ಅನ್ನವನ್ನು ನೀಡುವ ಬಡವರ ಕಣ್ಣೀರನ್ನು ಒರೆಸುವ ಕೆಲಸಗಳನ್ನು ಜನರು ಮಾಡಬೇಕು. ಅಜ್ವಾನದ ಆಚರಣೆಗಳನ್ನು ಬಿಟ್ಟು ಸುಜ್ಞಾನವನ್ನು ಬೆಳೆಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಅಂತಹ ಕಾರ್ಯಕ್ರಮಗಳನ್ನು ಹೊಸಮಠ ಮಾಡುತ್ತಿದೆ ಎಂದರು. 

  ಚಿತ್ರದುರ್ಗದ ಮುರಘಾ ಶರಣರು, ಹೊಸಮಠದ ಬಸವಶಾಂತಲಿಂಗ ಶ್ರೀಗಳು, ಸಂಜೀವ ಕುಮಾರ ನೀರಲಗಿ, ಪರಮೇಶಪ್ಪ ಮೇಗಳಮನಿ, ಎಸ್.ಎಫ್.ಎನ್. ಗಾಜಿಗೌಡ್ರ, ಪ್ರಕಾಶ ಶೆಟ್ಟಿ, ಇಂದುಧರ ಯರೇಶಿಮಿ, ಮೃತ್ಯುಂಜಯ ತುರಕಾಣಿ, ನಾಗೇಂದ್ರ ಕಟಕೋಳ, ಶರಣ ಸಂಸ್ಕೃತಿ ಉತ್ಸವ ಸಮಿತಿ ಅಧ್ಯಕ್ಷ, ಡಾ ಬಸವರಾಜ ವೀರಾಪೂರ, ಉಪಾಧ್ಯಕ್ಷ ಶ್ರೀಧರ ದೊಡ್ಡಮನಿ, ಕಾಯರ್ಾಧ್ಯಕ್ಷ ಶಿವಕುಮಾರ ಸಂಗೂರ, ಪರಮೇಶಪ್ಪ ಮೇಗಳಮನಿ,  ಡಾ. ಮೃಂತ್ಯುಂಜಯ ತುರಕಾಣಿ ರುದ್ರೇಶ ಚೆನ್ನಣ್ಣನವರ, ಎನ್.ಬಿ. ಕಾಳೆ, ಶಿವಬಸಪ್ಪ ಮುದ್ದಿ, ಮಲ್ಲಿಕಾಜರ್ುನ ಹಿಂಚಿಗೇರಿ, ಚಂದ್ರಶೇಖರ ಶಿಶುನಳ್ಳಿ, ಮುರುಗೆಪ್ಪ ಕಡೆಕೊಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.