ರೈತರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ: ಶಾಸಕ ಓಲೇಕಾರ

ಹಾವೇರಿ07: ಇತ್ತೀಚಿನ ದಿನಗಳಲ್ಲಿ ರೈತರು ಕೂಲಿಕಾಮರ್ಿಕರ ಸಮಸ್ಯೆ ಎದುರಿಸುತ್ತಿದ್ದು, ಕೃಷಿ ಯಂತ್ರಧಾರೆ ಯೋಜನೆಯಡಿ ವಿತರಿಸುವ ಕೃಷಿ ಯಂತ್ರೋಪಕರಣಗಳು ಅನೂಕೂಲವಾಗುತ್ತವೆ. ರೈತ ಭಾಂದವರು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ನೆಹರು ಓಲೇಕಾರ ಅವರು ಹೇಳಿದರು.

ಗುರುವಾರ ನಗರದ ಎ.ಪಿ.ಎಮ್.ಸಿ ಆವರಣದಲ್ಲಿ ರೈತ ಸಂಪರ್ಕ ಕೇಂದ್ರದ ವತಿಯಿಂದ ವೀರೇಶ ಅಗ್ರಿಟೆಕ್ ಬಾಡಿಗೆ ಆಧಾರಿತ ಕೃಷಿ ಯಂತ್ರಧಾರೆ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಡ ಮತ್ತು ಮಧ್ಯಮ ವರ್ಗದ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಈ ಯೋಜನೆಯನ್ನು ಇಲಾಖೆಯು ಜಾರಿಗೆ ತಂದಿರುವುದು ಸಂತಸದ ಸಂಗತಿ. ಕೃಷಿ ಯಂತ್ರಧಾರೆ ಯೋಜನೆಯು ಸಕಾಲದಲ್ಲಿ ರೈತರಿಗೆ ಕಡಿಮೆ ಬಾಡಿಗೆ ರೂಪದಲ್ಲಿ ಯಂತ್ರೋಪಕರಣಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಸಹಾಯಕ ಕೃಷಿ ನಿದರ್ೇಶಕ ಕರಿಯಲ್ಲಪ್ಪ ಡಿ.ಕೆ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿ ಯಂತ್ರಧಾರೆ ಕೇಂದ್ರವು 2014-15 ನೇ ಸಾಲಿನಲ್ಲಿ ತಾಲೂಕಿನ ಗುತ್ತಲ ಹೋಬಳಿಯಲ್ಲಿ ಈಗಾಗಲೇ ಪ್ರಾರಂಭವಾಗಿದೆ. ಅದೇ ಮಾದರಿಯಲ್ಲಿ ಕೃಷಿ ಯಂತ್ರಧಾರೆಯನ್ನು ಹಾವೇರಿ ಹೋಬಳಿಯಲ್ಲಿ ಪ್ರಾರಂಭಿಸಲಾಗಿದೆ. ರೈತರ ಬೇಡಿಕೆ ಅನುಸಾರ ಉಪಕರಣಗಳನ್ನು ಶೇ-70 ರ ರಿಯಾಯಿತಿ ದರದಲ್ಲಿ ಸರಕಾರಿ ವಂತಿಕೆ ಇನ್ನುಳಿದ ಶೇ-30 ರ  ವಂತಿಕೆಯನ್ನು ಸಂಸ್ಥೆಯವರು ಭರಿಸಿ ಕೃಷಿ ಯಂತ್ರೋಪಕರಣಗಳನ್ನು ಖರೀದಿ ಮಾಡಿ ವಿರೇಶ ಅಗ್ರಿಟೆಕ್ ಎಂಬ ಸಂಸ್ಥೆಯವರಿಗೆ ಯಂತ್ರೋಪಕರಣಗಳನ್ನು ದಾಸ್ತಾನಿಕರಿಸಿ, ಕೃಷಿ ಉಪಕರಣಗಳನ್ನು ರೈತರ ಬೇಡಿಕೆ ಅನುಸಾರ ಜೇಷ್ಠತಾ ಆದಾರದ ಮೇಲೆ ರೈತರಿಗೆ ಉಪಕರಣಗಳನ್ನು ಬಾಡಿಗೆ ರೂಪದಲ್ಲಿ ಸ್ಥಳಿಯ ಬಾಡಿಗೆ ದರಕ್ಕಿಂತ ಕಡಿಮೆ ಮೊತ್ತಕ್ಕೆ ರೈತರಿಗೆ ನೀಡಲಾಗುವುದು. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಉಪಕರಣಗಳ ಬಾಡಿಗೆ ದರ ನಿಗದಿಯಾಗುತ್ತದೆ ಹಾಗೂ ಪ್ರತಿ ಆರು ತಿಂಗಳಿಗೊಮ್ಮೆ ದರಗಳನ್ನು ಪರಿಷ್ಕರಣೆ ಮಾಡಲಾಗುತ್ತದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಕೊಟ್ರೇಶ ಗೆಜ್ಲಿ, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಶಿವಪುತ್ರಪ್ಪ ನೀಲಪ್ಪ ಶಿವಣ್ಣನವರ, ಕೃಷಿಕ ಸಮಾಜದ ಪ್ರದಾನ ಕಾರ್ಯದಶರ್ಿ ಬಸವರಾಜ ಹಾದಿಮನಿ ಹಾಗೂ ಕೃಷಿಕ ಸಮಾಜದ ನಿದರ್ೇಶಕರುಗಳಾದ ಪ್ರಕಾಶ ಹಂದ್ರಾಳ, ಬಸವರಾಜ ಡೊಂಕಣ್ಣನವರ, ಮಲ್ಲೇಶಪ್ಪ ಮತ್ತಿಹಳ್ಳಿ, ಪಕ್ಕಿರಪ್ಪ ಜಂಗಣ್ಣವರ ಮತ್ತು ನಾಗರಾಜ ವಿಭೂತಿ, ಜಿಲ್ಲಾ ಪ್ರತಿ ನಿಧಿ, ತಾಲ್ಲೂಕು ಕೃಷಿಕ ಸಮಾಜದ ಈರಣ್ಣ ಸಂಗೂರ ಹಾಗೂ ರೈತ ಸಂಘದ ಶಿವಬಸಪ್ಪ ಗೋವಿ , ಶಿವಯ್ಯ ರುಮಾಲಮಠ ಮತ್ತು ರೈತ ಬಾಂಧವರು, ಇಲಾಖೆ ಅಧಿಕಾರಿ ಆರ್.ಟಿ.ಕರಲಿಂಗಪ್ಪನವರ  ಭಾಗವಹಿಸಿದ್ದರು.