ಸಮರ್ಥತೆಯಿಂದ ಎದುರಿಸಿದಾಗ ಮಾತ್ರ ಹೆಚ್‌ಐ ಏಡ್ಸ ನೀರ್ಮೂಲನೆ ಸಾಧ್ಯ: ಧಾರವಾಡ

HIV can be eradicated only when tackled competently: Dharwad
ಬೆಳಗಾವಿ 02 ಯುವಕರಲ್ಲಿ ಅಗತ್ಯ ಅರಿವು ಮೂಡಿ ಸಮರ್ಥತೆಯಿಂದ ಎದುರಿಸಿದಾಗ ಮಾತ್ರ ಹೆಚ್‌ಐ ಏಡ್ಸ ನೀರ್ಮೂಲನೆ ಸಾಧ್ಯವೆಂದು” ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ ಎಸ್ ಸಿ ಧಾರವಾಡ ಅವರು ಮಾತನಾಡುತ್ತಿದ್ದರು. ಅವರು ಇಂದು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಹಾಗೂ ಕೆ ಎಲ್ ಇ ಸೆಂಟಿನರಿ ಇನ್ಸಿ-್ಟಟ್ಯುಟ್ ಆಫ್ ನರ್ಸಿಂಗ ಸೈನ್ಸ ನ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಏಡ್ಸ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಮಾತನಾಡುತ್ತಿದ್ದರು. “ವಿಶ್ವ ಆರೋಗ್ಯ ಸಂಸ್ಥೆಯು 1988 ರಲ್ಲಿಯೇ ಗುರುತಿಸಿ ಈ ಮೂಲಕ ನಾಗರಿಕರಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನು ಮಾಡುತ್ತಿದೆ. ಅಂದು ಸಂಪನ್ಮೂಲಗಳ ಕೊರತೆಯ ನಡುವೆಯೂ ಈ ರೋಗವನ್ನು ಹತ್ತಿಕ್ಕುವ ಪ್ರಯತ್ನವನ್ನು ವಿಶ್ವ ಆರೋಗ್ಯ ಸಂಸ್ಥೆಯು ಮಾಡಿತ್ತು ಅದರ ಹಂತ ಹಂತಗಳ ಸಂಶೋಧನೆಗಳ ಫಲಶ್ರುತಿಯಾಗಿ ಇಂದು ಹಲವಾರು ರೀತಿಯ ಓಷದೋಪಚಾರಗಳು ಲಭ್ಯವಿದೆ. ಇದರ ಪರಿಣಾಮವಾಗಿ ಇಂದು ಭಾರತದಲ್ಲಿ ಶೇಕಡಾ 79 ರಷ್ಟು ಏಡ್ಸ ರೋಗಿಗಳ ಸಾವು ತಗ್ಗಿದೆ. ಅದರಂತೆ ಹೊಸ ರೋಗಿಗಳಲ್ಲಿ ಶೆಕಡಾ 44 ರಷ್ಟು ಇಳಿಮುಖವನ್ನು ಕಂಡಿದೆ. ಈ ನಿಟ್ಟಿನಲ್ಲಿ ಯುವ ವೈದ್ಯಕೀಯ ವೃತ್ತಿಯಲ್ಲಿರುವ ನೀವುಗಳು ಈ ವಿಷಯದ ಬಗ್ಗೆ ಅರಿತು ನಿಮ್ಮ ಸುತ್ತಮುತ್ತಲ ನಾಗರಿಕರಿಗೆ ತಿಳಿಸಿದರೆ ಜೀವನ ಸಾರ್ಥಕವಾಗುವದು” ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನರ್ಸಿಂಗ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯ ವೈದ್ಯ ಹಾಗೂ ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀನಿವಾಸ ಬಿ ಅವರು ಮಾತನಾಡುತ್ತ “ ಇಂದು ಹೆಚ್‌ಐವಿ ಏಡ್ಸ ತಡೆಗಟ್ಟುವದರ ಜೊತೆಗೆ ಪೀಡಿತರೊಂದಿಗೆ ನಾವು ಹೇಗೆ ಸಹಬಾಳ್ವೆ ಮಾಡಬೇಕೆಂದು ತಿಳಿದುಕೊಳ್ಳುವದು ಅಗತ್ಯವಿದೆ. ಯುವಕರಿಗೆ ಸವಾಲೆನ್ನಿಸುವ ಈ ಸನ್ನಿವೇಶವನ್ನು ಎದುರಿಸುವ ಹಾಗೂ ಜಾಣ್ಮೆಯಿಂದ ತಡೆಗಟ್ಟುವ ಕಲೆಗಳನ್ನು ಹಸ್ತಗತ ಮಾಡಿಕೊಂಡಾಗಲೇ ಇದು ಸಾಧ್ಯವಿದೆ. ಹೆಚ್‌ಐವಿ ಏಡ್ಸ ಹೇಗೆ ಹರಡುತ್ತ-್ತದೆ ಎಂದು ತಿಳುವಳಿಕೆ ನೀಡಿ ಎಚ್ಚರಿಸಿದರು. ಕೆ ಎಲ್ ಇ ಸೆಂಟಿನರಿ ಇನ್ಸಿ-್ಟಟ್ಯುಟ್ ಆಫ್ ನರ್ಸಿಂಗ ಸೈನ್ಸ ನ ಪ್ರಾಂಶುಪಾಲರಾದ ಶ್ರೀ ವಿಕ್ರಾಂತ ನೇಸರಿ ಅವರು ಸ್ವಾಗತಿಸಿದರು. ನರ್ಸಿಂಗ ವಿದ್ಯಾರ್ಥಿನಿ ಕು. ಪ್ರಿಯಾಂಕ ನಿರೂಪಿಸಿದರು. ಕು. ಅನುಷಾ ವಂದಿಸಿದರು. ಕಾರ್ಯಕ್ರಮದಲ್ಲಿ 70 ಜನ ನರ್ಸಿಂಗ ವಿದ್ಯಾರ್ಥಿಗಳು ಬಾಗವಹಿಸಿದ್ದರು.