ಆದಿನಾಥ ವಿದ್ಯಾಮಂದಿರದ ನೂತನ ಕಟ್ಟಡ ಉದ್ಗಾಟನೆ: ಡಾಽಽ ವಿಶಾಲ ತಂಗಾ
ಚಡಚಣ18: ಕಳೆದ 3 ವರ್ಷಗಳ ಹಿಂದೆ ಪ್ರಾರಂಭವಾದ ಚಿಂತಾಮಣಿತಂಗಾ ಫೌಂಡೇಶನದ ಆದಿನಾಥ ವಿದ್ಯಾಮಂದಿರವು ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಇವರು ವಿದ್ಯೆಯ ಪೂರ್ಣ ಸುಖ ಬಯಸಿದವರು. ಜಗತ್ತಿನ ಶಕ್ತಿಯನ್ನು ಪಡೆದವ ಆದಿನಾಥ. ಅವನ ಶಕ್ತಿ ಈ ವಿದ್ಯಾಸಂಸ್ಥೆಗೆ ಬರಲಿ ಎಂದು ಹತ್ತಳ್ಳಿ ಹಿರೇಮಠದ ಷ.ಬ್ರ.ಗುರುಪಾದೇಶ್ವರ ಮಹಾಸ್ವಾಮಿಗಳು ಹೇಳಿದರು. ಪಟ್ಟಣದ ಹಳೆಯ ಹಾವಿನಾಳ ರಸ್ತೆಯಲ್ಲಿರುವ ಆದಿನಾಥ ವಿದ್ಯಾಮಂದಿರದ ನೂತನಕಟ್ಟಡ ಉದ್ಘಾಟನೆಯ ಸಾನಿಧ್ಯವಹಿಸಿ ಮಾತನಾಡುತ್ತ, ವೈದ್ಯ ವೃತ್ತಿಯಲ್ಲಿದ್ದರೂ ಶಿಕ್ಷಣ ಪ್ರೇಮಿಗಳು ಡಾಽಽ ತಂಗಾ.ನಡೆದಾಡುವ ದೇವರು ಸಿದ್ಧೇಶ್ವರ ಶ್ರೀಗಳವರು ಶಿಕ್ಷಣ ಪಡೆದ ಪುಣ್ಯ ಸ್ಥಳವಾಗಿದೆ. ಅವರ ಅದ್ಭುತ ಶಕ್ತಿ ಸಂಸ್ಥೆಗೆ ಬರಲಿ. ಹಣಕ್ಕೆ ಆಸೆ ಮಾಡದೆ ಉತ್ತಮ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿರುವರು. ಇಂತಹ ವೈದ್ಯರಿದ್ದರೆ ಯಾವರೋಗವು ಬರಲಾರದು. ಈ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದರು.ತದ್ದೇವಾಡಿ ಹಿರೇಮಠ ಮಹಾಂತಯ್ಯ ಶ್ರೀಗಳು ಮಾತನಾಡಿ, ಡಾಽಽ ತಂಗಾರವರು ಉತ್ತಮ ಶಿಕ್ಷಣದ ಕನಸು ಕಂಡವರು.ಅದು ನನಸಾಗಿದೆ. ವಿದ್ಯಾಮಂದಿರಗಳು ಹೆಚ್ಚಾದಂತೆ ಮಕ್ಕಳು ಜ್ಞಾನವಂತರಾಗುವರು. ಜಗತ್ತಿನ ಮಹಾನ ಭಾಸ್ಕರ ಸಿದ್ಧೇಶ್ವರ ಶ್ರೀಗಳವರಂತೆ ಇಲ್ಲಿನ ಮಕ್ಕಳು ಶಾಲೆಯಿಂದ ಉದಯಿಸಲಿ ಎಂದರು. ವಿದ್ಯಾಮಂದಿರದ ಗೌರವ ಕಾರ್ಯದರ್ಶಿ ಡಾಽಽ ವಿಶಾಲ ತಂಗಾ ಪ್ರಾಸ್ತಾವಿಕವಾಗಿ ಮಾತನಾಡಿ, 3 ವರ್ಷಗಳಿಂದ ಶಾಲೆಯು ಬಾಡಿಗೆಯ ರೂಪದಲ್ಲಿತ್ತು. ವೈದ್ಯನಾದರೂ ಆಸ್ಪತ್ರೆ ಸ್ವಂತಕಟ್ಟಡ ಮಾಡುವ ಹಂಬಲವಿಲ್ಲ. ಆದರೆ ವಿದ್ಯಾಮಂದಿರಕ್ಕೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿರುವೆ. ಮಕ್ಕಳು ಸುಸಂಕೃತ ಜ್ಞಾನವಂತರೂದೇಶ ಪ್ರೇಮಿಗಳಾಗಬೇಕೆಂಬುದು ನನ್ನ ಆಸೆಯಾಗಿದೆ. ನನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.ನಿವೃತ್ತ ಪ್ರಾಚಾರ್ಯಆರ್.ಪಿ.ಬಗಲಿ ಮಾತನಾಡಿ, ಡಾಽಽ ತಂಗಾರವರು ವೈದ್ಯ ವೃತ್ತಿಯಲ್ಲಿದ್ದು ಶಿಕ್ಷಣ ಕ್ರಾಂತಿ ಮಾಡಿದವರು. ಜ್ಞಾನಕ್ಕಿಂತ ಶ್ರೇಷ್ಠವಾದುದು ಮತ್ತೊಂದಿಲ್ಲ. ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ಬೆಳೆಯುವುದು ಸುಲಭದ ಮಾತಲ್ಲ. ಗಳಿಕೆಯ ಆಸೆ ಪಡದೆ ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡಿದವರು. ಈ ಸಂಸ್ಥೆಯಿಂದ ಅಮೂಲ್ಯ ರತ್ನಗಳು ಹೊರಹೊಮ್ಮಿ ಹೆಸರು ಮಾಡಲಿ ಎಂದರು.ಬಿಇಓ ಸುಜಾತ ಹುನ್ನೂರ, ವಿರಕ್ತ ಮಠದ ಷಡಕ್ಷರ ಸ್ವಾಮಿಗಳು, ದೇವಿ ಅಕ್ಕನವರು, ಯೋಗಾನಂದ ಶ್ರೀಗಳು, ಈಶ ಪ್ರಸಾದ ಶ್ರೀಗಳು ಮಾತನಾಡಿ, ಡಾಽಽ ವಿಶಾಲ ತಂಗಾರವರ ಗುಣಗಾನ ಮಾಡಿ, ಡಾಽಽ ತಂಗಾರವರಂತೆ ಶಿಕ್ಷಣ ಪ್ರೇಮಿಗಳಾಗಿ, ಸಮಾಜ ಸೇವಕರಾಗಿ ಕಾರ್ಯನಿರ್ವಹಿಸಬೇಕು. ವಿದ್ಯಾಮಂದಿರವು ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದರು.ಪ್ರಾರಂಭದಲ್ಲಿ ಚಿಂತಾಮಣಿ ತಂಗಾ, ಆದಿನಾಥ, ಸಿದ್ಧೇಶ್ವರ ಶ್ರೀಗಳವರ ಭಾವಚಿತ್ರಗಳಿಗೆ ಪುಷ್ಪ ಸಮರ್ಿಸಲಾಯಿತು. ಪಹಲ್ಗಾಮನಲ್ಲಿ ಉಗ್ರರ ದಾಳಿಗೆ ಬಲಿಯಾದ ಭಾರತದ ನಾಗರಿಕರಿಗೆ ಒಂದು ನಿಮಿಷ ಮೌನ ಆಚರಿಸಿ ಶೃದ್ಧಾಂಜಲಿ ಸಲ್ಲಿಸಲಾಯಿತು.ಎಸ್.ಕೆ.ಕುಲಕರ್ಣಿ ಶಿಕ್ಷಕರು ನಿರೂಪಿಸಿ ವಂದಿಸಿದರು.ಮಾಜಿ ಪ.ಪಂ.ಅಧ್ಯಕ್ಷ ಬಾಬುಗೌಡ ಪಾಟೀಲ, ಡಾಽಽ ವ್ಹಿ.ಎಸ್.ಪತ್ತಾರ, ಸಿದ್ದಣ್ಣ ಸಾಹುಕಾರ ಬಿರಾದಾರ, ಗುರುಬಾಳಪ್ಪ ಗಿಡವೀರ, ದೇವಪ್ಪಗೌಡ ಪಾಟೀಲ, ನಾಗರಾಜ ನಿರಾಳೆ, ಪ್ರಾಚಾರ್ಯಎಮ್.ವ್ಹಿ.ಕಟಗೇರಿ, ಪ್ರೋ.ಅರಳಿ, ಮಹಾವೀರ ತಂಗಾ, ಸಂಜೀವತಂಗಾ, ರಾಜೀವತಂಗಾ, ಸಂಸ್ಥೆಯಅಧ್ಯಕ್ಷೆ ಸೌಜನ್ಯ ತಂಗಾ ಇನ್ನಿತರರು ಇದ್ದರು.