ರೈಲು ಪ್ರಯಾಣಿಕರಿಗೆ ಪೂರೈಸುವ ಚಹಾ, ಉಪಹಾರ, ಊಟದ ದರ ಹೆಚ್ಚಿಸಿ ಐಆರ್ ಟಿಸಿ ಶಾಕ್ ..!

ನವದೆಹಲಿ, ನ 15  :      ರೈಲ್ವೆ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ - ಐಆರ್ಸಿಟಿಸಿದೊಡ್ಡ ಆಘಾತ ನೀಡಿದೆ.  

ನಿಗಮ  ಗುರುವಾರ ಹೊರಡಿಸಿದ   ತನ್ನ ಸುತ್ತೋಲೆಯ ಪ್ರಕಾರ, ರಾಜಧಾನಿ,  ಶತಾಬ್ಡಿ,   ಡುರೊಂಟೊ ಎಕ್ಸ್ಪ್ರೆಸ್   ರೈಲುಗಳಲ್ಲಿ   ಪ್ರಯಾಣಿಕರಿಗೆ ಪೂರೈಸುವ    ಚಹಾ, ಉಪಹಾರ ಹಾಗೂ  ಊಟದ   ದರಗಳನ್ನು  ಹೆಚ್ಚಿಸಲಾಗಿದೆ.   

ನವೆಂಬರ್ 14 ರಿಂದ ರಾಜಧಾನಿ / ಶತಾಬ್ದಿ /  ಡುರಂಟೋ  ರೈಲುಗಳಲ್ಲಿ    ಪ್ರಯಾಣಿಕರಿಗೆ  ಪೂರೈಸಲಾಗುವ  ಐಠದ  ಮೇಲೆ  ಕ್ಯಾಟರಿಂಗ್ ಸೇವೆ ದರಗಳನ್ನು  ಐಆರ್ಸಿಟಿಸಿ  ಹೆಚ್ಚಿಸಿದೆ.  15 ದಿನಗಳ ನಂತರ ಹೊಸ  ತಿನಿಸುಗಳ  ಪಟ್ಟಿ  ಪ್ರಕಟಿಸಲಾಗುವುದು, ಪರಿಷ್ಕೃತ   ದರಗಳು   ಸುತ್ತೋಲೆ  ಹೊರಡಿಸಿದ ದಿನದಿಂದ 120 ದಿನಗಳ  ಕಾಲ  ಅನ್ವಯವಾಗಲಿದೆ.   

ದರಗಳ ಪರಿಷ್ಕರಣೆಯ ನಂತರ,  ರಾಜಧಾನಿ,  ಡುರೊಂಟೊ ಮತ್ತು ಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಒಂದು ಕಪ್ ಚಹಾದ ಬೆಲೆ10 ರೂ.ನಿಂದ 15 ರೂ.ಗೆ ಹೆಚ್ಚಳವಾಗಲಿದೆ. . ಅದೇ ಸ್ಲೀಪರ್ ಕ್ಲಾಸ್ ಮತ್ತು ಸೆಕೆಂಡ್ ಕ್ಲಾಸ್ ಎಸಿ ಬೋಗಿಗಳಲ್ಲಿ ಚಹಾದ ಬೆಲೆ ರೂ. 20.   ಇನ್ನೂ  ಊಟದ  ದರಗಳಿಗೆ  ಬಂದರೆ   ಡುರಂಟೊಎಕ್ಸ್ಪ್ರೆಸ್ ಸ್ಲೀಪರ್ ಕ್ಲಾಸ್ನಲ್ಲಿ  ಭೋಜನ ರೂ. 120 ಪಾವತಿಸಬೇಕಾಗುತ್ತದೆ. ಹಿಂದಿನ ಬೆಲೆ. ರೂ 80. ಆಗಿತ್ತು.    ಈ  ರೈಲುಗಳಲ್ಲಿ   ಸಂಜೆ   ವೇಳೆ ಪ್ರಥಮ ದರ್ಜೆ ಎಸಿ ಮತ್ತು ಎಕ್ಸಿಕ್ಯುಟಿವ್   ದರ್ಜೆ  ಗಳಲ್ಲಿ  ಚಹಾಕ್ಕೆ 35 ರೂ. (6 ರೂ  ಹೆಚ್ಚಳ) ಉಪಹಾರ ರೂ. 140, (ರೂ. 7 ರೂ ಹೆಚ್ಚಳ) ಲಂಚ್ ಡಿನ್ನರ್ ರೂ 245( ರೂ 15 ಏರಿಕೆ).ಹೆಚ್ಚಳಗೊಂಡಿದೆ.