ಲೋಕದರ್ಶನ ವರದಿ
ಬೆಳಗಾವಿ 27: ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ "ಇಂಡಸ್ಟ್ರಿ ರೆಡಿ ಇಂಜನೀಯರ್ಸ ಮತ್ತು ಉದ್ಯಮಶೀಲತೆ" ಕುರಿತಾದ ಎರಡು ದಿನಗಳ ಕಾರ್ಯಾಗಾರವನ್ನು ದಿನಾಂಕ 25 ಮತ್ತು 26 ಫೆಬ್ರುವರಿ 2020 ರಂದು ಮೆಕ್ಯಾನಿಕಲ್ ಇಂಜನೀಯರಿಂಗ್ ವಿಭಾಗದಿಂದ ಆಯೋಜಿಸಲಾಗಿತ್ತು.
ಇಂಜನೀಯರಿಂಗನ ಮುಖ್ಯ ವ್ಯವಸ್ಥಾಪಕ ಸಾಗರ ಜಂಗರೂಚೆ ಕಾರ್ಯಾಗಾರಕ್ಕೆ ಚಾಲನೆ ನೀಡಿ ಕೈಗಾರಿಕಾ ಕ್ಷೇತ್ರಗಳಲ್ಲಿ ಆಗುತ್ತಿರುವ ಮಹತ್ವದ ಬೆಳವಣಿಗೆ ಮತ್ತು ಕೈಗಾರಿಕಾ ಕೌಶಲ್ಯಕ್ಕೆ ಬೇಕಾದ ತಂತ್ರಾಂಶಗಳ ಬಗ್ಗೆ ಪ್ರಾಯೋಗಿಕ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲರು ಹಾಗೂ ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಸಂಜಯ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳು ಈ ಕಾಯರ್ಾಗಾರದಿಂದ ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕೆಂದು ಹೇಳಿದರು.
ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಸೋಮರೆಡ್ಡಿ ಬಸವರೆಡ್ಡಿ ಮಾತನಾಡಿ ವಿದ್ಯಾರ್ಥಿಗಳು ಕೈಗಾರಿಕೊದ್ಯಮ ಮತ್ತು ಉದ್ಯಮಶೀಲತೆಯನ್ನು ಅಳವಡಿಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು. ನಗರದ ಬೇರೆ ಬೇರೆ ಕೈಗಾರಿಕೊದ್ಯಮಿಗಳಾದ ನಿರಂಜನ ಕರಗಿ, ವಿನಾಯಕ ಲೋಕೂರ, ಯಶವಂತ ಪಾಟೀಲ, ವಿನಯಕುಮಾರ ಮತ್ತು ಗಜೇಂದ್ರ ತ್ರಿಪಾಠಿ ಪ್ರಾಸ್ತಾವಿಕ ಮಾತನಾಡಿದರು.
ಆಡಳಿತಾಧಿಕಾರಿ ರಾಜು ಜೋಶಿ, ಸಂಯೋಜಕ ಪ್ರೊ. ಚನ್ನಪ್ಪ ಕೋರಿಶೆಟ್ಟಿ ಮತ್ತು ಪ್ರೊ. ವಿ. ಸುಶಾಂತಕುಮಾರ, ಪ್ರೊ. ರಾಜಶೇಖರ ಅಂಗಡಿ ಸೇರೆದಂತೆ ಎಲ್ಲ ಪ್ರಾಧ್ಯಾಪಕರು, ಉಪನ್ಯಾಸಕರು ಹಾಗೂ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಐಶ್ವರ್ಯ ಬಸ್ತವಾಡ ಸ್ವಾಗತಿಸಿದರು. ನಿಖಿತಾ ನಾಡಗೌಡ ನಿರೂಪಿಸಿದರು. ಸಮೀಕ್ಷಾ ಮಾಯೆಕರ ವಂದಿಸಿದರು.