ಪಡಿತರ ಪಡೆಯಲು ಅಂತರ ಕಾಯ್ದುಕೊಳ್ಳದ ಜನ

ಲೋಕದರ್ಶನವರದಿ

ರಾಣೇಬೆನ್ನೂರು11: ವಿಶ್ವಾಧ್ಯಂತ ಕೊರೊನಾ ವೈರಸ್ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದು, ಭಾರತವು ಹೊರತಾಗಿಲ್ಲದ ಕಾರಣ ದೇಶದಲ್ಲಿ ಲಾಕ್ ಡೌನ್ ಮಾಡಲಾಗಿದ್ದು, ನಾಗರೀಕರು ಮನೆಯಲ್ಲಿ ಇದ್ದು ವೈರಸ್ ಹರಡದಂತೆ ಸಹಕಾರ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರೂ ಸಹ ತಾಲೂಕಿನ ಮಾಕನೂರ ಗ್ರಾಮದಲ್ಲಿ ಪಡಿತರ ಪಡೆಯಲು ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮುಗಿ ಬಿದ್ದಿರುವ ಘಟನೆ ಶನಿವಾರ ಮಾಕನೂರು ಗ್ರಾಮದಲ್ಲಿ ನಡೆದಿದೆ.

  ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಪೊಲೀಸರು ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರೂ ಕ್ಯಾರೆ ಎನ್ನುತ್ತಿಲ್ಲ. ಇದರಿಂದ ಕುಮಾರಪಟ್ಟಣ ಠಾಣೆಯ ಮುಖ್ಯ ಪೇದೆ ಮೋಹನಸಿಂಗ್ ಹರಸಾಹಸ ಪಡಬೇಕಾಯಿತು.

      ಕೊನೆಗೂ ಲಾಠಿಯ ಬಿಸಿ ತೋರಿಸಲು ಮುಂದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮುಂದಾರು.

  ಇದೇ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ತಹಶೀಲ್ದಾರ ಬಸನಗೌಡ ಕೊಟೂರ ಅವರು ಪಡಿತರವು ಎಲ್ಲರಿಗೂ ದೊರೆಯಲಿದೆ. ಆತಂಕ ಪಡುವ ಅಗತ್ಯಬೇಡ.

ಸಾಮಾಜಿಕ ಅಂತರ ಕಾಯ್ದುಕೊಂಡು ಸರತಿಯ ಮೇಲೆ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.

   ಶಾಸಕ ಅರುಣಕುಮಾರ ಪೂಜಾರ, ಗ್ರಾಪಂ ಅಧ್ಯಕ್ಷ ಸದಾಶಿವನಗೌಡ ಮಲ್ಲನಗೌಡ್ರ, ಸದಸ್ಯ ನಾಗಪ್ಪ ಬಾಕರ್ಿ, ಮಂಜುನಾಥ ಓಲೇಕಾರ, ವಿಶ್ವನಾಥ ಪಾಟೀಲ, ವಿನಯಕುಮಾರ ಮಲ್ಲನಗೌಡ್ರ, ಚೋಳಪ್ಪ ಕಸವಾಳ, ಪವನಕುಮಾರ ಮಲ್ಲಾಡದ, ಮಂಜುನಾಥ ಕೆಂಚರಡ್ಡಿ, ಅನಿಲ್ ಸಿದ್ದಾಳಿ, ಪಿಡಿಓ ಗಾಯತ್ರಮ್ಮ ಹೊಸಂಗಡಿ, ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.