ವಿಶೇಷಜ್ಞರ ಸೇವೆಯ ಪ್ರಾರಂಭ

Launch of specialist service

ಬೆಳಗಾವಿ 03: ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬ್‌ಲ್ ಆಸ್ಪತ್ರೆಯ ವತಿಯಿಂದ ಪ್ರಾರಂಭಿಸಲಾದ ಉದ್ಯಮಬಾಗದಲ್ಲಿರುವ ಶ್ರೀ ಶೇಷಗಿರಿ ಎಂಜಿನಿಯರಿಂಗ ಕಾಲೇಜಿನ ಕ್ಯಾಂಪಸ್ಸಿನಲ್ಲಿನ ಕೆ ಎಲ್ ಇ ಆಸ್ಪತ್ರೆಗೆ  ಬರುವ ಗುರುವಾರ ದಿ. 05ನೇ ಡಿಸೆಂಬರ 2024 ರಿಂದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ  ಚಿಕ್ಕ ಮಕ್ಕಳ ವೈದ್ಯರು ಹಾಗೂ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞ ವೈದ್ಯರು ಪ್ರತಿ ಗುರುವಾರ ಮದ್ಯಾಹ್ನ 02 ಗಂಟೆಯಿಂದ ಸಾಯಂಕಾಲ 05 ವರೆಗೆ  ನುರಿತ ತಜ್ಞ ವೈದ್ಯರು ಭೇಟಿ ನೀಡುತ್ತಾರೆ ಹಾಗೂ ಜನರಲ ಮೆಡಿಸಿನ ನುರಿತ ತಜ್ಞ ವೈದ್ಯರು ಪ್ರತಿ ಶುಕ್ರವಾರ ಮದ್ಯಾಹ್ನ 02 ಗಂಟೆಯಿಂದ ಸಾಯಂಕಾಲ 05 ವರೆಗೆ   ತಜ್ಞ ವೈದ್ಯರು ಭೇಟಿ ನೀಡುತ್ತಾರೆ  

ಈ ಕಾರ್ಯಕ್ರಮವನ್ನು ಯು ಎಸ್ ಎಮ್ ಕೆ ಎಲ್ ಇ ಯ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ ಅವರು, ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಅವರು, ಉದ್ಯಮಬಾಗ ನ ಹೆಸರಾಂತ ಉದ್ಯಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಲ್ಲದೇ ವಿವಿಧ ಸೇವೆಗಳಿರುವ ಈ ಸಮಯವನ್ನು ಅವಶ್ಯಕವಿರವ ರೋಗಿಗಳು ಈ ಲಾಭ ಪಡೆದುಕೊಳ್ಳಬಹುದು ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಹಾಗೂ ಮೊಬೈಲ್ ಸಂಖ್ಯೆಗಳಾದ 8197018277, 9480563507 ಗಳ ಮೇಲೆ ಸಂಪರ್ಕಿಸಲು ಸೂಚಿಸಿದ್ದಾರೆ.