ಸುವರ್ಣಸೌಧದ ಬಳಿ ಆಡಳಿತ ನಿರ್ಮಾಣಕ್ಕೆ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸಲಿ
ಬೆಳಗಾವಿ 03: ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಿ ನೂತನವಾಗಿ ಆಡಳಿತದ ನಿರ್ಮಾಣ ಮಾಡಲುಅಧಿವೇಶನದಲ್ಲಿ ಸರಕಾರ ನಿರ್ಣಯಅಂಗೀಕರಿಸಬೇಕುಎಂದುಉತ್ತರಕರ್ನಾಟಕ ವಿಕಾಸ ವೇದಿಕೆ ಅಧ್ಯಕ್ಷ ಬಿ.ಡಿ.ಹಿರೇಮಠ ಹೇಳಿದರು.
ಮಂಗಳವಾರಬೆಳಗಾವಿಯಲ್ಲಿ ಮಾಧ್ಯಮದವರಜೊತೆ ಮಾತನಾಡಿದಅವರು, ಸುವರ್ಣ ವಿಧಾನಸೌಧಕ್ಕೆ ಶಕ್ತಿ ತುಂಬುವ ಕೆಲಸ ಆಗಬೇಕು.ಬೆಳಗಾವಿಯನ್ನು ರಾಜ್ಯದಎರಡನೇರಾಜಧಾನಿಯಾಗಿ ಮಾಡಬೇಕು.ಇಲ್ಲದೆಇದ್ದರೆ ಹೋರಾಟದ ಸ್ವರೂಪ ಬದಲಾಗುತ್ತದೆಎಂದುಎಚ್ಚರಿಕೆ ರವಾನಿಸಿದರು.ಉತ್ತರಕರ್ನಾಟಕದ ನ್ಯಾಯಪರ ಬೇಡಿಕೆಈಡೇರಿಸುವ ನಿಟ್ಟಿನಲ್ಲಿ ಹೋರಾಟ ನಡೆಸಿ ಅವುಗಳನ್ನು ಪಡೆಯುವ ಅನಿವಾರ್ಯತೆಇದೆ.ಜನಪ್ರತಿನಿಧಿಗಳು ಜನಪರ ಕೆಲಸ ಮಾಡಿದರೆಇಂಥ ಹೋರಾಟಗಳು ನಡೆಯುವುದಿಲ್ಲ ಎಂದುಅವರು ಹೇಳಿದರು.
2011ರಲ್ಲಿ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧಉದ್ಘಾಟನೆಗೊಂಡರೂಜನಪ್ರತಿನಿಧಿಗಳ ಇಚ್ಛಾಸಕ್ತಿ ಕೊರತೆಯಿಂದಜನರ ಸ್ಪಂದನೆಗೆ ನ್ಯಾಯಯುತವಾಗಿಇದುವರೆಗೂ ಬೇಡಿಕೆಗಳು ಈಡೇರಿಲ್ಲಎಂದು ತಿಳಿಸಿದರು.ಉತ್ತರಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆ ನಡೆಸುತ್ತೇವೆಎಂದು ಹತ್ತು ದಿನಗಳ ಕಾಲ ಕಾಟಾಚಾರಕ್ಕೆಅಧಿವೇಶನ ನಡೆಸಲಾಗುತ್ತದೆ.ಇದುವರೆಗೂಅಧಿವೇಶನಜನರ ಆಶೋತ್ತರಗಳಿಗೆ ಸ್ಪಂದಿಸಿಲ್ಲ ಎಂದುಟೀಕೆ ಮಾಡಿದರು.
ಇದೇ ವೇಳೆ ಅಶೋಕ ಪೂಜಾರಿ ಮಾತನಾಡಿ, ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನವನ್ನುಕಾಟಾಚಾರಕ್ಕಾಗಿ ನಡೆಸಬೇಡಿ.ಈ ಭಾಗದ ಸಮಸ್ಯೆ ಬಗ್ಗೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಕೆಲಸ ಮಾಡಬೇಕು.ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣ ಮಾಡಿದರೆಉತ್ತರಕರ್ನಾಟಕದಜನರಿಗೆ ನ್ಯಾಯ ಸಿಗುತ್ತದೆ ಎಂಬ ಆಶಾಭಾವನೆಇತ್ತು.ಆದರೆ, ಬೆಳಗಾವಿಯಲ್ಲಿ ನಡೆಯುವಅಧಿವೇಶನದಿಂದಇದುವರೆಗೂಯಾವುದೇ ಲಾಭವಾಗಿಲ್ಲಎಂದುಅವರುಅಸಮಾಧಾನ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾಹಿತಿ ಹಕ್ಕು ಕಾರ‌್ಯಕರ್ತ ಭೀಮಪ್ಪಗಡಾದ ಸೇರಿದಂತೆಅನೇಕರು ಉಪಸ್ಥಿತರಿದ್ದರು.