ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಜೀವ, ಜೀವನದ ಉಳಿವಿಗಾಗಿ ಎಲ್ಲರೂ ಒಂದಾಗೋಣ: ವೆಂಕಯ್ಯ ನಾಯ್ಡು

ನವದೆಹಲಿ, ಜೂ 28: ಕೋವಿಡ್-19 ಸಾಂಕ್ರಾಮಿಕದಿಂದ ಜನರ ಜೀವ ಮತ್ತು ಜೀವನವನ್ನು ರಕ್ಷಿಸಲು ದೇಶದ ಎಲ್ಲರೂ ಒಗ್ಗಟ್ಟಾಗಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಕರೆ ನೀಡಿದ್ದಾರೆ. ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಅವರು, ಹಲವು ದೇಶಗಳು ಲಾಕ್‌ಡೌನ್‌ ಅಂತ್ಯಗೊಳಿಸಿದ್ದು, ಆರ್ಥಿಕತೆಯ ಮೇಲೆ ಗಮನ ಹರಿಸಿವೆ ಎಂದಿದ್ದಾರೆ. ಆರ್ಥಿಕತೆಗೆ ಉತ್ತೇಜನ ನೀಡಲು ಸರ್ಕಾರ ನಿರಂತರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದ ಅವರು, ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಮತ್ತು ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಸರ್ಕಾರವನ್ನು ಬೆಂಬಲಿಸುವಂತೆ ಜನರನ್ನು ಮನವಿ ಮಾಡಿದರು.

ಈ ಅಭೂತಪೂರ್ವ ಆರೋಗ್ಯ ಬಿಕ್ಕಟ್ಟಿನ ವಿರುದ್ಧ ಸಾಮೂಹಿಕವಾಗಿ ಹೋರಾಡಲು ಜನರಿಗೆ ಕರೆ ನೀಡಿದ ನಾಯ್ಡು, ನಮ್ಮ ದೇಶದ ಶಕ್ತಿ ಆಧ್ಯಾತ್ಮಿಕತೆ ಮತ್ತು ವಿಜ್ಞಾನದ ಮೇಲಿನ ನಂಬಿಕೆಯಲ್ಲಿದೆ ಎಂದು ಹೇಳಿದರು.ಜನರು ಆತಂಕಗೊಳ್ಳುವ ಬದಲು ನಿವಾರಣೆ ಮತ್ತು ರಕ್ಷಣೆಯತ್ತ ಗಮನ ಹರಿಸಬೇಕು. ಕೋವಿಡ್‌-19 ಸಾಂಕ್ರಾಮಿಕದ ಪರಿಹಾರ ಮುನ್ನೆಚ್ಚರಿಕೆಯಲ್ಲಿದೆ. ಅದನ್ನು ತಡೆಯಲು ಮಾಸ್ಕ್‌ಗಳ  ಬಳಕೆ, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಮತ್ತು ಆಗಾಗ್ಗೆ ಕೈ ತೊಳೆಯುವುದು ಮುಂತಾದ ಸರಳ ಕ್ರಮಗಳು ಸುರಕ್ಷಿತವಾಗಿರಲು ಇರುವ ಏಕೈಕ ಮಾರ್ಗ ಎಂದು ಸಲಹೆ ನೀಡಿದರು. ಈ ಹಂತಗಳ ಜೊತೆಗೆ, ಸಾಂಪ್ರದಾಯಿಕ ಆಹಾರಗಳು, ಗಿಡಮೂಲಿಕೆಗಳು ಮತ್ತು ಔಷಧೀಯ ಸಸ್ಯಗಳ  ಬಳಕೆಯ ಸಲಹೆ ನೀಡಿದ ಅವರು, ಯೋಗ ಮತ್ತು ಧ್ಯಾನದ ಪ್ರಾಮುಖ್ಯತೆಯನ್ನು ವಿವರಿಸಿದರು. 

“ಯೋಗ,  ಪ್ರಾಣಾಯಾಮ ಮತ್ತು ನಿಯಮಿತವಾಗಿ ದೈಹಿಕ ವ್ಯಾಯಾಮವನ್ನು ಮನೆಯಲ್ಲಿಯೇ ಮಾಡಬಹುದಾಗಿದೆ,  ಇದು ನಮ್ಮ ದೇಹವನ್ನು ವೈರಸ್ ನಿಂದ ದೂರವಿಡುತ್ತದೆ” ಎಂದರು. ಸಾಂಕ್ರಾಮಿಕ ರೋಗವು ಅನೇಕರ ಜೀವನದಲ್ಲಿ ಸೃಷ್ಟಿಸಿರುವ ಅನಿಶ್ಚಿತತೆ ಮತ್ತು ಆತಂಕದ ಬಗ್ಗೆ ಉಲ್ಲೆಖಿಸಿದ ಅವರು, ಬಹಳಷ್ಟು ಪರಿಣಾಮಗಳು ನಮ್ಮ ಮನಸ್ಸನ್ನು ಅವಲಂಬಿಸಿರುತ್ತದೆ. ನಮ್ಮ ಆತಂಕವನ್ನು ಕಡಿಮೆ ಮಾಡಲು ನಾವು ಮಾರ್ಗ ಹುಡುಕಬೇಕು ಮತ್ತು ಅದು ನಮ್ಮನ್ನು ಉತ್ತಮಗೊಳಿಸದಂತೆ ನೋಡಿಕೊಳ್ಳಬೇಕು ಎಂದರು. ಇಂತಹ ಸಂಕಷ್ಟದ ಸಂದರ್ಭದಲ್ಲಿ ಜನರು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಬೇಕು, ತಂತ್ರಜ್ಞಾನವು ವಾಸ್ತವಿಕವಾಗಿ ಸಹಭಾಗಿತ್ವ ಮತ್ತು ಸಂಪರ್ಕದಲ್ಲಿರಲು ನೆರವಾಗುತ್ತದೆ ಎಂದಿದ್ದಾರೆ.ಅರ್ಜುನನಿಗೆ ಕೃಷ್ಣ ನೀಡಿದ ಸಲಹೆಯನ್ನು ಉಲ್ಲೇಖಿಸಿದ ನಾಯ್ಡು, ಜನರು 'ಅಗತ್ಯವಾದುದನ್ನು ಮಾಡುವುದನ್ನು ಮುಂದುವರಿಸಬೇಕು ಮತ್ತು ಅದನ್ನು ಉತ್ತಮವಾಗಿ ಮಾಡಬೇಕು' ಎಂದರಲ್ಲದೆ, ಜನರು ತಾಳ್ಮೆಯಿದ್ದಿದ್ದು, ಈ ಭಯಾನಕ ಅಲೆ ಸಾಕಷ್ಟು ಕಾಲ ಮುಂದುವರಿಯಲಾರದು ಎಂಬುದರ ಮೇಲೆ ನಂಬಿಕೆಯಿಡಬೇಕು ಎಂದಿದ್ದಾರೆ. ಇಂತಹ ನಿಬಂಧನೆಯ ಬದಕು ಯಾವಾಗ ಅಂತ್ಯಗೊಳ್ಳುತ್ತದೆ ಮತ್ತು ಸಹಜ ಬದುಕು ಮರಳುತ್ತದೆ ಎಂಬುದಕ್ಕೆ ಸೂಕ್ತ ಉತ್ತರಗಳನ್ನು ನೀಡಲಾಗದು ಎಂದ ಅವರು, ಸಾಂಕ್ರಮಿಕ ರೋಗ ಉಂಟು ಮಾಡಿರುವ ಒತ್ತಡದೊಂದಿಗೆಯೇ ಕೆಲ ಕಾಲ ಜೀವಿಸಬೇಕಿದೆ ಎಂದರು.