ಬೆಟಗೇರಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಮಹಾದೇವ ಕಂಬಿ, ಉಪಾಧ್ಯಕ್ಷರಾಗಿ ಗಂಗವ್ವ ತೋಟಗಿ ಆಯ್ಕೆ
ಬೆಟಗೇರಿ, 18 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಶನಿವಾರ ಮೇ.17ರಂದು ನಡೆದ ಸಂಘದ ಆಡಳಿತ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಚುನಾವಣಾ ಪ್ರಕ್ರಿಯೆಯಲ್ಲಿ ಬೆಟಗೇರಿ ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ನೇತೃತ್ವದ ಗುಂಪಿನ ಸದಸ್ಯ ಮಹಾದೇವ ಚಂದ್ರ್ಪ ಕಂಬಿ ಅಧ್ಯಕ್ಷರಾಗಿ, ಉಪಾಧ್ಯಕ್ಷೆಯಾಗಿ ಗಂಗವ್ವ ಬಸಪ್ಪ ತೋಟಗಿ ಆಯ್ಕೆಯಾಗಿದ್ದಾರೆ.
ಒಟ್ಟು 12 ಸದಸ್ಯರ ಬಲ ಹೊಂದಿರುವ ಸಂಘ, ಅಧ್ಯಕ್ಷ ಸ್ಥಾನಕ್ಕೆ ಪ್ರತಿಸ್ಪರ್ಧಿಯಾಗಿ ಸತ್ತೆಪ್ಪ ಹೊರಟ್ಟಿ 5 ಮತ ಪಡೆದು ಪರಾಭವಗೊಂಡರು. ಮಹಾದೇವ ಕಂಬಿ 6 ಮತ ಪಡೆದು ಜಯಗಳಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಮಹಾದೇವ ಮಾಳೇದ 5 ಮತ ಪಡೆದು ಪರಾಭಗೊಂಡರು. ಗಂಗವ್ವ ತೋಟಗಿ 6 ಮತ ಪಡೆದು ಜಯಗಳಿಸಿದರು. ಈ ವೇಳೆ ನೂತನ ಅಧ್ಯಕ್ಷ ಮಹಾದೇವ ಕಂಬಿ, ಉಪಾಧ್ಯಕ್ಷೆ ಗಂಗವ್ವ ತೋಟಗಿ ಅವರನ್ನು ಸತ್ಕರಿಸಲಾಯಿತು. ಚುನಾವಣಾಧಿಕಾರಿಯಾಗಿ ಎಸ್.ಬಿ.ಬಿರಾದಾರ ಪಾಟೀಲ ಕಾರ್ಯನಿರ್ವಹಿಸಿದರು.
ಅರ್ಜುನ ದೇಯಣ್ಣವರ, ಹನುಮಂತ ಸವತಿಕಾಯಿ, ಕೆಂಪಣ್ಣ ಪೇದನ್ನವರ, ಈಶ್ವರ ಮುಧೋಳ, ಈರಣ್ಣ ಬಳಿಗಾರ, ಬಸವರಾಜ ದಂಡಿನ, ಅಶೋಕ ಕೋಣಿ, ಬಸವರಾಜ ಮಾಳೇದ, ಲಖನ ಚಂದರಗಿ, ಮಹಾಂತೇಶ ಸಿದ್ನಾಳ, ಸಿದ್ಧಾರೂಢ ಸವತಿಕಾಯಿ, ದುಂಡಪ್ಪ ಕಂಬಿ, ಶಂಕರ ಕೋಣಿ, ಸಂಘದ ಆಡಳಿತ ಮಂಡಳಿ ಸದಸ್ಯರಾದ ಶಿವಪ್ಪ ಬಳಿಗಾರ, ಸಿದ್ಧೇಶ್ವರ ಕುರಬೇಟ, ವಿಜಯ ಮಠದ, ಅರ್ಜುನ ಬ್ಯಾಗಿ, ಯಲ್ಲಾಲಿಂಗ ದೇಯಣ್ಣವರ, ಮಲ್ಲಿಕಾರ್ಜುನ ಪೇದನ್ನವರ, ಸುರೇಶ ತಳವಾರ, ಬಸವ್ವ ಕೋಣಿ, ಗ್ರಾಪಂ ಸದಸ್ಯರು, ಮುಖ್ಯ ಕಾರ್ಯನಿರ್ವಾಹಕ ನಿಂಗಪ್ಪ ನೀಲಣ್ಣವರ, ರಾಜಕೀಯ ಮುಖಂಡರು, ಗಣ್ಯರು, ಯುವಕರು, ಇತರರು ಇದ್ದರು.