ಅಥಣಿಯಿಂದ ಶ್ರವಣಬೆಳಗೊಳಕ್ಕೆ ನೂತನ ಬಸ್ ಸಂಚಾರ ಪ್ರಾರಂಭ

New bus service from Athani to Shravanabelagola begins

ಅಥಣಿಯಿಂದ ಶ್ರವಣಬೆಳಗೊಳಕ್ಕೆ ನೂತನ ಬಸ್ ಸಂಚಾರ ಪ್ರಾರಂಭ  

ಕಾಗವಾಡ: ಇತ್ತಿಚಿಗೆ ಅಥಣಿಯಿಂದ ಜೈನ ತೀರ್ಥಕ್ಷೇತ್ರ ಶ್ರವಣಬೆಳಗೊಳಕ್ಕೆ ನೂತನ ಬಸ್ ಸಂಚಾರ ಪ್ರಾರಂಭವಾಗಿದ್ದು, ಈ ಹಿನ್ನಲೆಯಲ್ಲಿ ತಾಲೂಕಿನ ಮೋಳೆ ಗ್ರಾಮದ ಜೈನ ಬಾಂಧವರು ರವಿವಾರ ದಿ. 18 ರಂದು ಗ್ರಾಮಕ್ಕೆ ಆಗಮಿಸಿದ ಬಸ್‌ಗೆ ಪೂಜೆ ಸಲ್ಲಿಸಿ, ಚಾಲಕ ಮತ್ತು ನಿರ್ವಾಹಕರಿಗೆ ಸನ್ಮಾನಿಸಿ ಬಿಳ್ಕೋಟ್ಟರು. ಈ ವೇಳೆ ಗ್ರಾಮದ ಜೈನ ಮುಖಂಡರು ಮಾತನಾಡಿ, ಈ ಬಸ್ ಅಥಣಿಯಿಂದ ಮೋಳೆ ಮಾರ್ಗವಾಗಿ ಚಿಕ್ಕೋಡಿ, ಬೆಳಗಾವಿ, ಶಿವಮೊಗ್ಗ, ಹರಿಹರ, ಚನ್ನಪಟ್ಟಣ ಮೂಲಕ ಶ್ರವಣಬೆಳಗೊಳಕ್ಕೆ ತಲುಪಲಿದ್ದು, ಚಿಕ್ಕೋಡಿ ಉಪವಿಭಾಗದಲ್ಲಿ ಅತೀ ಹೆಚ್ಚಾಗಿ ಜೈನರಿರುವ ಕಾರಣ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜು ಕಾಗೆ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಇತ್ತಿಚಿಗೆ ಶ್ರವಣಬೆಳಗೊಳಕ್ಕೆ ನೂತನ ಬಸ್ ಸಂಚಾರ ಪ್ರಾರಂಭಿಸಿದ್ದು, ಇದರಿಂದ ಈ ಭಾಗದ ಜೈನರಿಗೆ ಅನಕೂಲವಾಗಿದೆ ಎಂದರು.  ಮೋಳೆ ಗ್ರಾಮದ ಜೈನ ಶ್ರಾವಕ-ಶ್ರಾವಕಿಯರು ಉಪಸ್ಥಿತರಿದ್ದರು.