ಬೆಳಗಾವಿ ಜು.3: ನಗರದ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳು ರೋಗಿಯ ಕೈಯಲ್ಲಿ ಸ್ಲಾಯನ್ ಬಾಟಲ್ ಕೊಟ್ಟು ಅಂಬುಲೆನ್ಸ್ಗೆ ಹತ್ತಿಸಿಕೊಂಡ ಅಮಾನವೀಯ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಶುಕ್ರವಾರ ಅಪಘಾತದಲ್ಲಿ ಗಾಯಗೊಂಡ ಯುವಕ ಬೀಮ್ಸ್ ಆಸ್ಪತ್ರೆಯ ತುತರ್ು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಯುವಕನ್ನು ಸಾಮಾನ್ಯ ವಾಡರ್್ಗೆ ಸ್ಥಳಾಂತರ ಮಾಡುವ ವೇಳೆಯಲ್ಲಿ ಆಸ್ಪತ್ರೆಯ ಸಿಬ್ಬಂದಿ ಸ್ಲಾಯನ್ ಬಾಟಲ್ ಅನ್ನು ರೋಗಿಯ ಕೈಯಲ್ಲಿಯೇ ಕೊಟ್ಟು ಅಂಬುಲೆನ್ಸ್ ಹತ್ತಿಸಿದ್ದಾರೆ. ಜಿಲ್ಲಾಸ್ಪತ್ರೆಯ ಸಿಬ್ಬಂದಿಯ ವಿರುದ್ಧ ಜನರು ಆಕ್ರೋಶ್ ವ್ಯಕ್ತ ಪಡಿಸಿದ್ದಾರೆ.