ಬೆಳಗಾವಿ 04 : ಮುಗ್ಧ ಮನಸ್ಸಿನ ವಿಕಲಚೇತನರು ಸಮಾಜದ ಆಸ್ತಿಯಾಗಿದ್ದಾರೆ. ಅವರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಅವಕಾಶ ಕಲ್ಪಿಸಬೇಕು, ಅವರನ್ನು ಪ್ರೀತಿಯಿಂದ ಕಾಣುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಬೇಕು ಎಂದು ಸುರೇಶ ಯಾದವ ಪೌಂಡೇಶನ ಅಧ್ಯಕ್ಷ ಸುರೇಶ ಯಾದವ ಹೇಳಿದರು. ಇಲ್ಲಿನ ರಾಮತೀರ್ಥನಗರದಲ್ಲಿ ವಿ ಆರ್ ಡಬ್ಲ್ಯೂ, ಯು ಆರ್ ಡಬ್ಲ್ಯೂ ಮತ್ತು ಎಂ ಆರ್ ಡಬ್ಲ್ಯೂ ಹಾಗೂ ಸುರೇಶ್ ಯಾದವ ಪೌಂಡೇಶನ ಸಹಯೋಗದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಕಲಚೇತನರಿಗೆ ಅವಕಾಶ ನೀಡಿದಾಗ ಮಾತ್ರ ಕೂಡ ಸಮಾಜದಲ್ಲಿ ಸಾಧನೆ ಮಾಡಲು ಸಾಧ್ಯ. ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸುವ ಬೌದ್ಧಿಕ ಸಾಮರ್ಥ್ಯ ವಿದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಅವರನ್ನು ಪ್ರತ್ಯೇಕವಾಗಿ ಪರಿಗಣಿಸುವ ಪರಿಪಾಠವು ಕೆಲವಡೆ ಕಾಣಿಸುತ್ತದೆ ಅಥವಾ ಕೆಲವಡೆ ಅವರಿಗೆ ಇನ್ನಿಲ್ಲದ ಅನುಕಂಪ ತೋರುವುದು ಇದೆ. ಇದು ತಪ್ಪು ಅಂಗವಿಕಲರಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕಿದೆ. ಹೀಗಾಗಿ ಸಮಾಜದ ಮುಖ್ಯ ವಾಹಿನಿಗಳಲ್ಲಿ ಗುರುತಿಸಿಕೊಳ್ಳಬಲ್ಲರು ಸಮಾಜದಲ್ಲಿ ಮಹತ್ವ ಜನರಿಗೆ ಗೊತ್ತಾಗಬೇಕು ಎಂಬ ಉದ್ದೇಶದಿಂದಲೇ ವರ್ಷದ ಒಂದು ದಿನವನ್ನು ಅವರಿಗಾಗಿ ಮೀಸಲಿರಿಸಲಾಗಿದೆ ಎಂದು ಹೇಳಿದರು. ಈ ಸಮಾರಂಭ ದಲ್ಲಿ ಕಿರಣ್ ಇಳಿಗೆರ್, ಎಂ ಆರ್ ಡಬ್ಲ್ಯೂ, ಶೋಭಾ ಸವದಿ ನಗರ ಕೇಂದ್ರ ಗ್ರಂಥಾಲಯ ಗ್ರಂಥ ಪಾಲಕರು, ಮಹಾಂತೇಶ್ ಹೊಂಗಲ್. ಆಕಾಶ್ ಬೇವಿನಕಟ್ಟಿ , ಸೂರಜ್ ದಾಮನೆಕರ್, ಕಲ್ಪನಾ ಮುಚ್ಚಂಡಿ , ಶ್ರೀಧರ್ ಕೊಲ್ಕರ್, ಕಾಶಿನಾಥ್ ಕೊಲ್ಕರ್ ಬೆಳಗಾವಿ ತಾಲೂಕಿನ ಎಲ್ಲಾ ವಿ ಆರ್ ಡಬ್ಲ್ಯೂ ಯು ಆರ್ ಡಬ್ಲ್ಯೂ ಉಪಸ್ಥಿತರಿದ್ದರು.