ಸವಣೂರ 10: ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಲೋಕಾರೆ್ಣ ಸಮಾರಂಭ ಹಾಗೂ ಭವ್ಯ ಮೆರವಣಿಗೆ ಮೇ-12 ಸೋಮವಾರ ಬೆಳಿಗ್ಗೆ 9 ಘಂಟೆಗೆ ಜರುಗಲಿದೆ ಎಂದು ಮರಾಠ ಸಮಾಜದ ಸವಣೂರ ತಾಲ್ಲೂಕಾಧ್ಯಕ್ಷರಾದ ಉಮೇಶ ಮುಂಜೋಜಿ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ಮೇ -12 ರಂದು ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯ ಮೆರವಣಿಗೆ ಸವಣೂರ ನಗರದ ಶುಕ್ರವಾರಪೇಟೆಯ ವೀರುಗಲ್ಲಿಯ ವೀರಭದ್ರೇಶ್ವರ ದೇವಸ್ಥಾನದಿಂದ ನಗರದ ಪ್ರಮುಖ ರಾಜಬೀದಿಗಳ ಮೂಲಕ ಸಕಲ ವಾದ್ಯ ವೈಭವಗಳೊಂದಿಗೆ ಸಂಚರಿಸಿ ಮಧ್ಯಾಹ್ನ 1 ಘಂಟೆಗೆ ನಗರದ ಜೋಶಿ ಓಣಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯನ್ನು ಲೋಕಾರೆ್ಣ ಮಾಡಲಾಗುವುದು.ನಂತರ ಅನ್ನಸಂತರೆ್ಣ ಜರುಗುವುದು.ಅಂದು ಸಾಯಂಕಾಲ 5 ಘಂಟೆಗೆ ಸತ್ಯಭೋಧಸ್ವಾಮಿ ಮಠದ ಹತ್ತಿರದ ಭರಮಲಿಂಗೇಶ್ವರ ಸರ್ಕಲಿನಲ್ಲಿ ಬೃಹತ್ ಹಿಂದೂ ಧಾರ್ಮಿಕ ಸಭೆ ಜರುಗುವುದು.ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಬೆಂಗಳೂರಿನ ಗವಿಪುರಂ ಮಂಜುನಾಥ ಭಾರತಿ ಸ್ವಾಮೀಜಿ, ಸವಣೂರಿನ ಕಲ್ಮಠದ ಮ.ನಿ.ಪ್ರ. ಮಹಾಂತ ಮಹಾಸ್ವಾಮಿಗಳು, ಸವಣೂರಿನ ಅಡವಿಸ್ವಾಮಿ ಮಠದ ಮ.ನಿ.ಪ್ರ ಶಿವಕುಮಾರ ಮಹಾಸ್ವಾಮಿಗಳು, ಸವಣೂರಿನ ದೊಡ್ಡಹುಣಸೇ ಕಲ್ಮಠದ ಮ.ನಿ.ಪ್ರ ಚನ್ನಬಸವೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸುವರು. ಕೇಂದ್ರ ಸರ್ಕಾರದ ಮಂತ್ರಿಗಳಾದ ಪ್ರಲ್ಹಾದ ಜೋಶಿ ಹಾಗೂ ಯುವ ಉದ್ಯಮಿ ಮುಖಂಡರಾದ ಭರತ ಬಸವರಾಜ ಬೊಮ್ಮಾಯಿ ಇವರುಗಳು ಧರ್ಮಸಭೆ ಉದ್ಘಾಟಿಸಿಸುವರು. ಸವಣೂರಿನ ಯುವ ಉದ್ಯಮಿಗಳಾದ ಸುಮಂತ್ ರಾಜಶೇಖರ ಸಿಂಧೂರ ಮೆರವಣಿಗೆಗೆ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಹಾನಗಲ್ ಶಾಸಕರಾದ ಶ್ರೀನಿವಾಸ್ ಮಾನೆ, ಪುರಸಭೆಯ ಮಾಜಿಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಶೈಲಾ ಹನಮಂತಗೌಡ ಮುದಿಗೌಡ್ರ, ಕ್ಷತ್ರಿಯ ಮರಾಠ ಸಮಾಜದ ಜಿಲ್ಲಾಧ್ಯಕ್ಷರಾದ ಮಲ್ಲೇಶಪ್ಪ ವೆಂಕೋಜಿ, ಭೂ ದಾನಿಗಳಾದ ಶ್ರೀಮತಿ ಶಾರದಾ ಕೋಂ ರಾಮಣ್ಣ ಮುಂಜೋಜಿ ಹಾಗೂ ಮಕ್ಕಳು ಹಾಗೂ ಇತರ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಸವಣೂರ ನಗರದ,ಸವಣೂರ ತಾಲ್ಲೂಕಿನ ಮರಾಠ ಸಮಾಜದ ಮುಖಂಡರು, ಸಮಾಜದವರು,ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಾಲ್ಲೂಕಾಧ್ಯಕ್ಷರಾದ ಉಮೇಶ ಮುಂಜೋಜಿ ಅವರು ಪ್ರಕಟಣೆಯ ಮೂಲಕ ಕೋರಿದ್ದಾರೆ.