ಕರಾವಳಿ ರಕ್ಷಣಾ ಪಡೆಯಿಂದ ಸಮುದ್ರದಲ್ಲಿ ಸಂಕಷ್ಟದಲ್ಲಿದ್ದ ಆರು ಮೀನುಗಾರರ ರಕ್ಷಣೆ

 ಚೆನ್ನೈ, ನ 19  :        ಪ್ಲಿದಿು 70 ನೌಕಾ ಮೈಲು ದೂರದಲ್ಲಿನ ಕೇಪ್ ಕಮೋರಿನ್ ನಲ್ಲಿ ಸಮುದ್ರದ ಮಧ್ಯೆ ಸಿಲುಕಿಗೊಂಡು ತೀವ್ರ ಸಂಕಷ್ಟದಲ್ಲಿದ್ದ ಆರು  ಮೀನುಗಾರರನ್ನು ಭಾರತೀಯ ಕರಾವಳಿ ಕಾವಲು ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ.  

 ಮನಾರ್ ಕೊಲ್ಲಿಯಲ್ಲಿ ಗಸ್ತು ತಿರುಗುತ್ತಿದ್ದ ಐಸಿಜಿಎಸ್ ಆದೇಶ್ ಗೆ ಕರೆ ಬಂದಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಕ್ಕೆ ಮಾರ್ಗ ಬದಲಿಸಿ, ಆರು ಮೀನುಗಾರರಿದ್ದ 'ಎಲ್-ಸಹಾದೈ' ಮೀನುಗಾರಿಕಾ ದೋಣಿಯನ್ನು ರಕ್ಷಿಸಿದೆ ಎಂದು ನೌಕಾಪಡೆ ಪ್ರಕಟಣೆ ತಿಳಿಸಿದೆ.  

 ಈ ತಿಂಗಳ 17 ರಿಂದ ತಮಿಳುನಾಡು ಮೂಲದ ದೋಣಿ ಇಂಜಿನ್ ದೋಷದಿಂದ ಸಮುದ್ರದಲ್ಲಿ ಸಿಲುಕುಕೊಂಡಿತ್ತು.  

 ತುತ್ತುಕ್ಕುಡಿಯಲ್ಲಿನ ಸಮುದ್ರ ರಕ್ಷಣಾ ಉಪ ಕೇಂದ್ರ ಈ ತಿಂಗಳ 17 ರಂದು ಸಂಕಷ್ಟದ ಕರೆ ಸ್ವೀಕರಿಸಿದೆ.   

ದೋಣಿಯ ಸಂಕಷ್ಟದ ಸ್ಥಿತಿಯ ಬಗ್ಗೆ ಮಾಹಿತಿ ಪಡೆದ ನೌಕಾಪಡೆ ಹಡಗು ತಕ್ಷಣವೇ ಮಾರ್ಗ ಬದಲಿಸಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಹಡಗು ನಿನ್ನೆ ಸುಮಾರು ಬೆಳಿಗ್ಗೆ 8 ಗಂಟೆಗೆ ಆರಂಭಿಸಿತು.   

ಹೆಚ್ಚುವರಿಯಾಗಿ ಕರಾವಳಿ ಕಾವಲು ಪಡೆಯ ಡೊರ್ನಿಯರ್ ವಿಮಾನ ಶೋಧ ಕಾರ್ಯದಲ್ಲಿ ತೊಡಗಿತು. ಮಧ್ಯಾಹ್ನ ಸುಮಾರು 1.45ರ ಸುಮಾರಿಗೆ ಡೋರ್ನಿಯರ್ ವಿಮಾನ ದೋಣಿಯನ್ನು ಗುರುತಿಸಿ, ಐಸಿಜಿಎಸ್ ಆದೇಶ್ ಹಡಗಿಗೆ ಸಂದೇಶ ಕಳುಹಿಸಿದೆ.   

ಇಂಜಿನ್ನಲ್ಲಿ ದೋಷವನ್ನು ಸರಿಪಡಿಸಲು ಹಡಗಿನ ಸಿಬ್ಬಂದಿ ಪ್ರಯತ್ನಿಸಿದರಾದರೂ, ಇಂಜಿನ್ ಮತ್ತೆ ಕಾರ್ಯನಿರ್ವಹಿಸುವಲ್ಲಿ ವಿಫಲವಾಗಿದೆ. 

 ಸಂಜೆ ಸುಮಾರು 4.30ಕ್ಕೆ  ಐಸಿಜಿಎಸ್ ಆದೇಶ್ ದೋಣಿಯನ್ನು ಹಡಗು ಸುರಕ್ಷಿತವಾಗಿ ಕೊಲಾಚೆಲ್ಗೆ ಎಳೆದೊಯ್ದಿದ್ದು, ಇಂದು ಬೆಳಿಗ್ಗೆ 9 ಗಂಟೆಗೆ ತೆಂಗಪಟ್ಟಣಂ ಮೀನುಗಾರಿಕಾ ಬಂದರನ್ನು ತಲುಪಿಸಿದೆ.