ಬೆಳಗಾವಿಯಲ್ಲಿ ತಾರಕಕ್ಕೇರಿದ ಕುಕ್ಕರ್ ಹಂಚಿಕೆ ರಾಜಕಾರಣ

ಬೆಳಗಾವಿ ಜುಲೈ 08: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಕುಕ್ಕರ್ ಹಂಚಿಕೆಯ ವಿಷಯವಾಗಿ ಬೆಳಗಾವಿಯಲ್ಲಿ ಇಬ್ಬರು ನಾಯಕರ ನಡುವೆ ರಾಜಕೀಯ ಕುಕ್ಕರ್ ಈಗ ಸಿಟಿ ಹೊಡೆಯುತ್ತಿದ್ದು, ಇಬ್ಬರ ನಾಯಕರ ನಡುವೆ ಕುಕ್ಕರ್ ಸಮರ ಈಗ ತಾರಕಕ್ಕೆ ಏರಿದ್ದು, ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಕಾನೂನು ಸಮರಕ್ಕೆ ಸವಾಲ್ ಹಾಕಿರುವ ಸಚಿವ ರಮೇಶ ಜಾರಕಿಹೊಳಿ ಅವರು ಹೆಬ್ಬಾಳ ಅವರು ಕುಕ್ಕರ್ ಹಂಚಿಕೆಗೆ ಯಾರಿಂದ ಹಣ ಪಡೆದಿದ್ದಾರೆ ಎಂದು ತಮ್ಮ ಮನೆ ದೇವರ ಮೇಲೆ ಪ್ರಮಾಣ ಮಾಡಿ ಹೇಳಲಿ ಎಂದು ಭಹಿರಂಗ ಸವಾಲ ಹಾಕಿದ್ದಾರೆ.

ಬುಧವಾರ ಮುಂಬಯಿಗೆ ತೆರಳುವ ಮುಂಚೆ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ಕುಕ್ಕರ್ ಹಂಚಿಕೆಯ ವಿಷಯವಾಗಿ ನನ್ನ ವಿರುದ್ದ ಕೇಸು ಹಾಕುವದಾಗಿ ಹೇಳಿರುವ ಕುರಿತು ಪ್ರತಿಕ್ರಿಯೆ ನೀಡಿ, ಕಾನೂನು ಹೋರಾಟಕ್ಕೆ ನಾನೂ ಸಿದ್ಧನಿದ್ದೇನೆ. ಲಕ್ಷ್ಮೀ ಹೆಬ್ಬಾಳಕರ್ ಅವರ ವ್ಯಕ್ತಿತ್ವ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತಿದೆ, ಅವರು ಯಾರಿಂದ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.

ನನ್ನ ಉಪಕಾರ ಇಲ್ಲದೇ ಆಯ್ಕೆ ಆಗಿರುವುದಾಗಿ ಜನರ ಮುಂದೆ ಹೇಳಿ ಆಣೆ ಮಾಡಲಿ. ಲಕ್ಷ್ಮೀ ಹೆಬ್ಬಾಳಕರ ಹೇಗೆ ಗೆದ್ದಳು ಎನ್ನುವುದು ರಾಜ್ಯಕ್ಕೇ ಗೊತ್ತಿದೆ. ಹೆಬ್ಬಾಳ್ಕರ ಯಾರಿಂದ ಗೆದ್ದು ಬಂದಿದ್ದನ್ನು ಹೇಳಲಿ. ಆ ಹೆಣ್ಣು ಮಗಳಿಗೆ ರಾಜಕಾರಣ ಗೊತ್ತಿಲ್ಲ. ಬುಡಾ ಮೆಂಬರ್ ಮಾಡು ಅಂತ ಬಳಿ ಕಾಲಿಗೆ ಬಿದ್ದು ಕೇಳಿದ್ದು ನಾನು ಮರೆತಿಲ್ಲ. ಲಿಂಗಾಯತ ಹೆಣ್ಣು ಮಗಳು ಬೆಳೆಯಲಿ ಎಂಬ ಒಳ್ಳೆಯ ಉದ್ದೇಶಕ್ಕೆ ಸಹಾಯ ಮಾಡಿದ್ದೆ ಎಂದು ರಮೇಶ ತಿರುಗೇಟು ನೀಡಿದರು.

ಯುವ ಬಿಜೆಪಿ ಕಾರ್ಯಕರ್ತರಿಗೆ ಈ ಬಗ್ಗೆ ವಾಸ್ತವ ಸ್ಥಿತಿ ಗೊತ್ತಾಗಲಿ ಅನ್ನುವಗೋಸ್ಕರ ಈ ವಿಷಯ ಹೇಳಿದ್ದೇನೆ. ನಾನು ಅವಳಿಗೆ ದುಡ್ಡು ಕೊಟ್ಟಿಲ್ಲ ಎಂದು ಅವರ ಮನೆ ದೇವರಾದ ಹಟ್ಟಿಹೊಳಿ ವೀರಭದ್ರೇಶ್ವರ ದೇವರ ಮೇಲೆ ಆಣೆ ಮಾಡಿ ಹೇಳಲಿ. ನನ್ನ ಮನೆ ದೇವರಾದ ಕೊಲ್ಲಾಪುರ ಲಕ್ಷ್ಮೀ ದೇವರ ಮೇಲೆ ನಾನು ಆಣೆ ಮಾಡಲು ನಾನು ಸಿದ್ಧ ಎಂದು ನುಡಿದರು.