ಶ್ರಾವಣ ಮಾಸದ 6ನೇ ದಿನದ ಶಿವಬಸವೇಶ್ವರ ಪುರಾಣ ಪ್ರವಚನ

ಲೋಕದರ್ಶನವರದಿ

ಹಾವೇರಿ: ಭಾರತದ ಜೀವಾಳವೇ ಆಧ್ಯಾತ್ಮವಾಗಿದ್ದು, ಅಂತಹ ಪರಂಪರೆಯು ಮಠ ಮಾನ್ಯಗಳಿಂದ ವಿಸ್ತರಿಸುತ್ತಿದ್ದು, ಮನುಷ್ಯರು ಮಹಾತ್ಮನಾಗಿರುವ ಪುಣ್ಯ ಪುರಷರ ಜೀವನ ದರ್ಶನದ ಪ್ರವಚನವು ನಮ್ಮಲ್ಲಿ ಸಾತ್ವಿಕ ಮನಸ್ಸನ್ನು ಸೃಷ್ಠಿಸಿ ನೆಮ್ಮದಿಯ ಬದುಕನ್ನು ನಡೆಸಲು ಸಹಾಯಕವಾಗುತ್ತದೆ ಎಂದು          

      ನಗರದ ಹುಕ್ಕೇರಿಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿರುವ ಶಿವಬಸವೇಶ್ವರ ಪುರಾಣ ಪ್ರವಚನದ 6 ನೇ ದಿನದ ಕಾರ್ಯಕ್ರಮದಲ್ಲಿ ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಸ್ವಾಮೀಜಿ ಹೇಳಿದರು.

           ಇಂದಿನ ಸಮಾಜದಲ್ಲಿ ಮನುಷ್ಯ ಹಲವು ಒತ್ತಡಗಳ ಮಧ್ಯೆ ಬದುಕುತ್ತಿದ್ದಾನೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ಶ್ರಾವಣ ಮಾಸದ ಅನುಭಾವದ ನುಡಿಗಳು ಸಂಸಾರಿಕ ಜಗತ್ತಿನ ಜನರಿಗೆ ಸದ್ಗತಿಯನ್ನು ಹೊಂದಲು ಸಾಧ್ಯವಾಗುತ್ತದೆ. 

      ಸಮಾಜಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾತ್ಮರ ಜೀವನ ದರ್ಶನದ ಮೂಲಕ ಸಮಾಜ ಸೇವೆಯ ನಿಷ್ಠೆಯನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.

              ಸಮಾರಂಭದ ಹುಕ್ಕೇರಿಮಠ ಸದಾಶಿವ ಶ್ರೀ ವಹಿಸಿದ್ದರು. ಹನುಮನಾಳದ ಶಿವಾನಂದೀಶ್ವರ ಶಾಸ್ತ್ರಿಗಳು ಶಿವಬಸವೇಶ್ವರ ಪುರಾಣ ಪ್ರವಚನ ನೀಡಿದರು. ಅಕ್ಕನ ಬಳಗದ ಸದಸ್ಯರು ಶಿವಬಸವೇಶ್ವರ ತೊಟ್ಟಿಲು ಕಾರ್ಯ ನೆರವೇರಿಸಿದರು.

                  ಸಮಾರಂಭದಲ್ಲಿ ಎಸ್.ಎಸ್. ಹುರಳಿಕುಪ್ಪಿ, ಎಸ್. ಎಂ. ಹಾಲಯ್ಯನವರಮಠ, ಸಿ.ಜಿ.ತೋಟಣ್ಣನವರ, ಚನ್ನಪ್ಪ ಹಳಕೊಪ್ಪ, ಎಸ್.ಬಿ ಮಸಲವಾಡ, ಅಮೃತಕ್ಕ ಶೀಲವಂತರ, ಲಲಿತಕ್ಕ ಹೊರಡಿ, ಶರಣು ಬಟ್ಟರಕಿ, ಮತ್ತಿತರರು ಉಪಸ್ಥಿತರಿದ್ದರು.

     ಆಕಾಶವಾಣಿ ಕಲಾವಿದ ಎಸ್.ಬಿ ತಳವಾರ ವಚನ ಸಂಗೀತ ಪ್ರಸ್ತುತ ಪಡಿಸಿದರು. ಬಿ.ಬಸವರಾಜ ಸ್ವಾಗತಿಸಿದರು. ಕೆ.ಬಿ.ಬಿಕ್ಷಾವತರ್ೀಮಠ ಕಾರ್ಯಕ್ರಮ ನಿರ್ವಹಿಸಿದರು.