ಕುಲಗೋತ್ರ ನೋಡಿ ಸಮಾಜ ಕಟ್ಟಲಾಗದು: ಸಚಿವ ಪಾಟೀಲ

ಬಾಗಲಕೋಟೆ 2: ಮಾನವೀಯ ಮೌಲ್ಯಗಳನ್ನೊಳಗೊಂಡ ವಚನ, ಸಾಹಿತ್ಯ, ದಾಸ ಸಾಹಿತ್ಯ ಕೀರ್ತನೆಗಳೊಂದಿಗೆ ಮನುಕುಲವೆಲ್ಲ ಒಂದೇ ಎಂಬ ಭಾವನೆಯಿಂದ ಈ ನಾಡಿನಲ್ಲಿ ಆಗಿಹೋದ ಸಂತ ಮಹಾಂತ ದಾಸರೆಲ್ಲ ಕುಲಗೋತ್ರ ನೋಡಿ ಸಮಾಜ ಕಟ್ಟಿದವರಲ್ಲವೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ನವನಗರದ ಕಲಾಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲ ಭಾಷೆ ಎಲ್ಲ ಜನಾಂಗದಲ್ಲೂ ಒಬ್ಬ ಶ್ರೇಷ್ಠ ದಾರ್ಷನಿಕ ಅನಾದಿಕಾಲದಿಂದಲೂ ಆಗಿಹೋಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜನ ಅಂತಹ ಶ್ರೇಷ್ಠ ದಾಸರನ್ನು ಒಂದು ಸಮಾಜಕ್ಕೆ ಸೀಮಿತಗೊಳಿಸಿಕೊಳ್ಳುತ್ತಿರುವದರಿಂದ ಸಣ್ಣ ಸಣ್ಣ ಸಮಾಜಗಳಲ್ಲಿ ಬಿನ್ನಾಭಿಪ್ರಾಯಗಳು ಆಗಬಾರದೆಂಬ ಉದ್ದೇಶದಿಂದ ಸರಕಾರ ಎಲ್ಲ ಸಮಾಜದವರನ್ನು ಒಗ್ಗೂಡಿಸುವ ಕಾರ್ಯ ಮಾಡಿರುವುದಲ್ಲದೇ ಆಗಿಹೋದ ಸಂತ ಮಹಾಂತರನ್ನು ಸ್ಮರಿಸುವ ಕಾರ್ಯ ಸರಕಾರದಿಂದ ಆಚರಿಸುತ್ತಿರುವುದು ಎಲ್ಲ ಜನಾಂಗಕ್ಕೂ ಉಪಯೋಗವಾಗಿದೆ ಎಂದರು. ಶರಣರು, ದಾಸರು ನೂರಾರು ವರ್ಷಗಳಿಂದ ಆಗಿಹೋಗಿದ್ದರು ಕೂಡಾ ಅಂದೇ ಸಮಾಜದಲ್ಲಿ ಜಾತಿ ವ್ಯವಸ್ಥೆ ಬಗ್ಗೆ ತಮ್ಮ ವಚನಗಳಲ್ಲಿ ಇವನಾರವ ಇವನಾರವ ಎನ್ನದೇ ಇವ ನಮ್ಮವ ಇವ ನಮ್ಮವ ಎಂಬ ವಚನ ರಚಿಸಿದ ಬಸವಣ್ಣನವರು ಕುಲ ಕುಲ ಕುಲವೆಂದು ಹೊಡೆದಾಡದಿರಿ ಎಂಬ ಕನಕದಾಸರ ಕೀರ್ತನೆಗಳನ್ನು ಅವಲೋಕಿಸಿದಾಗ ಅಂತಹ ದಾರ್ಷನಿಕರ ಗುರಿ ಒಂದೇ ಅದೇ ಮನುಕುಲದ ಉದ್ದಾರ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿ.ಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ ಅನೇಕ ಮಹಾತ್ಮರೆಲ್ಲರೂ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲು ಅಲ್ಲಿ ಇಲ್ಲಿ ಹೋಗಿದ್ದರೆ, ದೇವರನ್ನು ತನ್ನ ಬಳಿ ಕರೆಯಿಸಿಕೊಂಡವರು ಕನಕದಾಸರು. ಇದಕ್ಕೆ ಉಡಪಿಯ ಕೃಷ್ಣ ಮಠದಲ್ಲಾದ ಘಟನೆಯೇ ಸಾಕ್ಷಿ ಎಂದರು.

ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಕನ್ನಡ ಭಾಷೆ, ನೆಲ ಜಲ ರಕ್ಷಣೆಗೆ ಶ್ರೇಷ್ಠ ಕವಿಗಳು ಶರಣರು ಎಣಿಸಿದ ಬಸವಾದಿ ಪ್ರಮತರು, ಪುರಂದರ ದಾಸರು ಇವರೆಲ್ಲವರಿಗಿಂತ ವಿಶಿಷ್ಟರಾದವರು ಕನಕದಾಸರು. ತಮ್ಮ ಕೀರ್ತನೆಯಲ್ಲಿ ಅಚ್ಛ ಕನ್ನಡದ ಕೀರ್ತನೆಗಳನ್ನು ನೀಡಿ ಇಂದಿಗೂ ಕೂಡಾ ಜನಮನದಲ್ಲಿದ್ದಾರೆ.

ಅಧ್ಯಕ್ಷತೆ ವಹಿಸಿದ್ದ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಮಹಾನ್ ವ್ಯಕ್ತಿ ಎನಿಸಿಕೊಂಡವರೆಲ್ಲ ಜೀವನದಲ್ಲಿ ಎರಡು ಕಾವ್ಯ ರಚಿಸುವಲ್ಲಿ ತಮ್ಮ ಇಡೀ ಜೀವನವನ್ನೇ ಸವಿಸಿದ್ದಾರೆ. ಆದರೆ ಕನಕದಾಸರು ನಾಲ್ಕು ಮಹಾ ಕಾವ್ಯವನ್ನು ರಚಿಸಿ ಮಾನವ ಕುಲದ ಸಮಾನತೆಯನ್ನು ಮೆರೆದಿದ್ದಾರೆ.

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಸರಕಾರಿ ಪ್ರಥಮ ದಜರ್ೆ ಕಾಲೇಜಿನ ಉಪನ್ಯಾಸಕ ಡಾ.ಚಿಕ್ಕಣ್ಣ ಯಣ್ಣೆಕಟ್ಟಿ ಉಪನ್ಯಾಸ ನೀಡುತ್ತಾ, ಬಾಡವೆಂಬ ಕುಗ್ರಾಮದಲ್ಲಿ ಜನಿಸಿದ ಕನಕದಾಸ ಬಾಡದ ಹೂವಾಗಿ ನಾಡಿನಲ್ಲಿ ಪ್ರಜ್ವಲಿಸಿದವರು. 12ನೇ ಶತಮಾನದ ಶರಣರ ವಚನ, 15ನೇ ಶತಮಾನದ ಕೀರ್ತನ ಕ್ರಾಂತಿಗಳ ಎರಡನ್ನು ಸರಿಸಾಟಿ ಮಾಡುವ ಕಲೆ ಕನಕದಾಸರ ಕೀರ್ತನೆಯಲ್ಲಿ ಕಂಡು ಬರುತ್ತವೆ. ಅಂದು ಮೇಲವರ್ಗದವರ ಕಿರುಕುಳ ಸಹಿಸಿ ಮನನೊಂದು ರಚಿಸಿದ ಅನೇಕ ಕೀರ್ತನಗಳಲ್ಲಿ ತಮ್ಮನ್ನೇ ತಾವು ಪ್ರಶ್ನಿಸಿಕೊಂಡಂತ "ತಲ್ಲನಿಸದಿರು ಕಂಡ್ಯಾ ತಾಳು ಮನವೆ" ಎಂದು ತಮ್ಮನ್ನೇ ತಾವು ಸಮಾಧಾನಿಸಿಕೊಂಡು ನಾಲ್ಕು ಮಹಾನ್ ಕಾವ್ಯಗಳ ಜೊತೆಗೆ 700ಕ್ಕೂ ಅಧಿಕ ಕೀರ್ತನೆಗಳನ್ನು ಈ ನಾಡಿಗೆ ನೀಡಿದ್ದಾರೆಂದರು.

ಇದೇ ಸಂದರ್ಭದಲ್ಲಿ ಜಿಲ್ಲಾಡಳಿತ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಪ್ರತಿ ವರ್ಷ ಕೊಡಮಾಡುವ ಕನಕಸಿರಿ ಪ್ರಶಸ್ತಿಯನ್ನು ಗುಳೇದಗುಡ್ಡದ ಸೆಗುಣಸಿ ಗ್ರಾಮದ ಕನ್ನಡ ಪ್ರಾದ್ಯಾಪಕ ಎಚ್.ಎಸ್.ಗಂಟಿ ನೀಡಲಾಯಿತು, ಬಾದಾಮಿ ತಾಲೂಕಿನ ಹಾನಾಪೂರ ಗ್ರಾಮದಿಂದ ಗೋವಾಕ್ಕೆ ಗುಳೆ ಹೋದ ಕುಟುಂಬದಲ್ಲಿ ಜನಿಸಿದ ಕುಮಾರಿ ತೇಜಸ್ವಿನಿ ದುರ್ಗದ 19 ವಯಸ್ಸಿನ ಗೋವಾ ರಾಜ್ಯ ಮಹಿಳಾ ತಂಡದ ಕ್ರಿಕೇಟ ನಾಯಕಿಯಾಗಿ ಆಯ್ಕೆಯಾಗಿದ್ದ ಹಿನ್ನಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ 35 ಸಾವಿರ ರೂ.ಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ತಾ.ಪಂ ಅದ್ಯಕ್ಷ ಚನ್ನನಗೌಡರ ಪರನಗೌಡರ, ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ, ಉಪವಿಭಾಗಾಧಿಕಾರಿ ಎಚ್.ಜಯ, ಸಮಾಜದ ಮುಖಂಡರಾದ ಹನಮಂತ ಗೊರವರ ಸೇರಿದಂತೆ ನಗರಸಭೆ ಸದಸ್ಯರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕಿ ಶಶಿಕಲಾ ಹುಡೇದ ಸ್ವಾಗತಿಸಿದರು. ಕಂದಾಯ ಇಲಾಖೆಯ ಎಂ.ಬಿ.ಗುಡೂರ ವಂದಿಸಿದರು. ಜಾಸ್ಮೀನ್ ಕಿಲ್ಲೆದಾರ ನಿರೂಪಿಸಿದರು.

ಪ್ರಾರಂಭದಲ್ಲಿ ಜಿಲ್ಲಾಡಳಿತದ ಆವರಣದಲ್ಲಿ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಶಾಸಕ ವೀರಣ್ಣ ಚರಂತಿಮಠ ಚಾಲನೆ ನೀಡಿದರು. ಮೆರವಣಿಗೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ನವನಗರ ಬಸ್ ನಿಲ್ದಾಣ, ಎಲ್.ಐ.ಸಿ ವೃತ್ತ, ನಗರಸಭೆ ಮಾರ್ಗವಾಗಿ ಕಲಾಭವನಕ್ಕೆ ತಲುಪಿತು. ಮೆರವಣಿಗೆಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಮತ್ತು ಸಮಾಜ ಮುಖಂಡಿರು ಪಾಲ್ಗೊಂಡಿದ್ದರು.