ವೇಳೆಗೆ ಸರಿಯಾಗಿ ಬಿತ್ತನೆ ಮಾಡಿಆರ್ಥಿಕವಾಗಿ ಅಭಿವೃದ್ದಿ ಹೊಂದಿ : ಶಾಸಕ ಪಠಾಣ

Sow seeds at the right time and prosper economically: MLA Pathana

ವೇಳೆಗೆ ಸರಿಯಾಗಿ ಬಿತ್ತನೆ ಮಾಡಿಆರ್ಥಿಕವಾಗಿ ಅಭಿವೃದ್ದಿ ಹೊಂದಿ : ಶಾಸಕ ಪಠಾಣ

ಶಿಗ್ಗಾವಿ 18  : ಸರಕಾರದಿಂದ ಸಬ್ಸಿಡಿ ಯೋಜನೆಯಲ್ಲಿ ಬಿತ್ತನೆಯ ಬೀಜವನ್ನು ಕೊಡಮಾಡುವ ವ್ಯವಸ್ಥೆ ಮಾಡಲಾಗಿದ್ದು ಪ್ರತಿಯೊಬ್ಬ ರೈತರು ತಮ್ಮ ಬಿತ್ತನೆಯ ಬೀಜ ಪಡೆದುಕೊಂಡು ವೇಳೆಗೆ ಸರಿಯಾಗಿ ಬಿತ್ತನೆ ಪ್ರಾರಂಭಿಸಬೇಕು ಎಂದು ರೈತರಿಗೆ ಶಾಸಕ ಯಾಶೀರ ಅಹ್ಮದಖಾನ ಪಠಾಣ ಹೇಳಿದರು.  ತಾಲೂಕಿನ ದುಂಡಶಿ ರೈತ ಸಂಪರ್ಕ ಕೇಂದ್ರದಲ್ಲಿ ಸಬ್ಸಿಡಿ ಯೋಜನೆಯಲ್ಲಿ ಬಿತ್ತನೆಯ ಬೀಜ ಕೋಡಮಾಡುವ ಯೋಜನೆ ಉದ್ಘಾಟಿಸಿ ಮಾತನಾಡಿದ ಅವರುಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಾಕಷ್ಟು ಜನಪರವಾದ ಯೋಜನೆ ತರಲಾಗಿದ್ದು ವೇಳೆಗೆ ಸರಿಯಾಗಿ ಬೀಜ ಬಿತ್ತನೆ ಮಾಡಿ ಅದರ ಸದುಪಯೋಗ ಪಡೆದುಕೊಳ್ಳಬೇಕು ಅಲ್ಲದೇ ತಾಲೂಕ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರೆಯಲಾಗುವುದು ಆ ವೇಳೆ ರೈತರಿಗೆ ಡಿಎಪಿ ಗೊಬ್ಬರಕ್ಕೆ ಲಿಂಕ್ ಹಾಗೂ ಹೊಲಕ್ಕೆ ಹೋಗುವ ದಾರಿಯ ವ್ಯವಸ್ಥೆಯನ್ನು ಮಾಡಲಾಗುವುದು ಆದ್ದರಿಂದ ಏನೇ ಸಮಸ್ಯೆಗಳಿದ್ದರೂ ಬಗೆಹರಿಸಲು ಸಾಧ್ಯ ಎಂದರು.  ತಹಶೀಲ್ದಾರ ರವಿಕುಮಾರ ಕೋರವರ, ಸಹಾಯಕ ಕೃಷಿ ನಿರ್ದೇಶಕ ಕೊಟ್ರೇಶ ಗೆಜ್ಜಿ, ಕೃಷಿಕ ಸಮಾಜದ ಅಧ್ಯಕ್ಷ ಹನುಮರಡ್ಡಿ ನಡುವಿನಮನಿ, ವೀರಣ್ಣಾ ಸಮಗೊಂಡ, ಮುತ್ತಣ್ಣಾ ಗುಡಗೇರಿ,ಮಾಲತೇಶ ಬಾರಕೇರ, ಮಂಜುನಾಥ ಹಾವೇರಿ, ಸಂತೋಷ ಚಾಕಲಬ್ಬಿ, ಶಿವಾನಂದ ಡಾವಣಗೇರಿ, ಅಣ್ಣಪ್ಪ ಲಮಾಣಿ, ನಾಗರಾಜ ದೇಸಾಯಿ, ಪ್ರಕಾಶ ಪಾಸಾರ ಸೇರಿದಂತೆ ಹಲವಾರು ರೈತರು ಪಾಲ್ಗೊಂಡಿದ್ದರು.