ಹಾವೇರಿ: ವಿದ್ಯಾಥರ್ಿಗಳಿಗೆ ಪಠ್ಯದ ಜೊತೆಗೆ ನಾಗರಿಕ ಪ್ರಜ್ಞೆ, ಸಾಮಾಜಿಕ ಶಿಸ್ತುಗಳನ್ನು ಕಲಿಸುವುದು ಅಗತ್ಯವಾಗಿದೆ. ಜಿಲ್ಲೆಯ ಆಯ್ದ ಶಾಲೆಯಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಘಟಕವನ್ನು ಸ್ಥಾಪಿಸಿ ವಿದ್ಯಾಥರ್ಿಗಳಿಗೆ ನಾಗರಿಕ ಆರಕ್ಷಕ ತರಬೇತಿಯನ್ನು ನೀಡಲಾಗುವುದು ಎಂದು ಕರ್ಜಗಿಯ ಕೇಂದ್ರೀಯ ವಿದ್ಯಾಲಯದಲ್ಲಿ ನೂತನ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಘಟಕವನ್ನು ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜೆ.ದೇವರಾಜ್ ಹೇಳಿದರು.
ನಾಗರಿಕ ಸಾಮಾಜ ಸುಧಾರಣೆಯಾಗಬೇಕಾದರೆ ಕಲಿಯುವ ಹಂತದಲ್ಲೇ ವಿದ್ಯಾಥರ್ಿಗಳಿಗೆ ಸಾಮಾಜಿಕ ಪ್ರಜ್ಞೆ, ನಾಗರಿಕ ತಿಳುವಳಿಕೆ, ಕಾನೂನುಗಳ ಅರಿವು ಮೂಡಿಸುವುದರ ಮೂಲಕ ಶಿಸ್ತು ಮೂಡಿಸಬೇಕು ಎಂಬುದು ಭಾರತದ ಮಾಜಿ ರಾಷ್ಟ್ರಪತಿ ದಿ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಆಶಯವಾಗಿತ್ತು.
ಈ ಹಿನ್ನೆಲೆಯಲ್ಲಿ 2010ರಿಂದಲೇ ಕೇರಳದಲ್ಲಿ ಎಸ್.ಪಿ.ಸಿ. ತರಬೇತಿ ಆರಂಭಗೊಂಡಿವೆ. ರಾಜ್ಯದಲ್ಲಿ ಈ ವರ್ಷ 96 ಶಾಲೆಗಳನ್ನು ಆಯ್ಕೆಮಾಡಲಾಗಿದೆ. ಜಿಲ್ಲೆಯ 12 ಶಾಲೆಗಳಲ್ಲಿ ಎಸ್.ಪಿ.ಸಿ ಘಟಕಗಳು ಇಂದಿನಿಂದ ಚಾಲನೆಗೊಳಿಸಲಾಗಿದೆ ತರಬೇತಿ ಆರಂಭಿಸಲಾಗಿದೆ ಎಂದು ಹೇಳಿದರು.
ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಂಟು ಮತ್ತು ಒಂಭತ್ತನೇ ತರಗತಿಯ ವಿದ್ಯಾಥರ್ಿಗಳಿಗೆ ಎಸ್.ಪಿ.ಸಿ. ತರಬೇತಿಯಡಿ ಎರಡು ವರ್ಷಗಳ ಕಾಲ ಜಿಲ್ಲಾ ಕೆ.ಎಸ್.ಆರ್.ಪಿ. ನುರಿತ ತಜ್ಞರಿಂದ ದೈಹಿಕ ಮತ್ತು ಮಾನಸಿಕ ಸಾಮಥ್ರ್ಯ ವೃದ್ಧಿಗೆ ಪೂರಕವಾಗಿ ತರಬೇತಿಯನ್ನು ನೀಡಲಾಗುವುದು. ಪ್ರತಿ ವಿದ್ಯಾಥರ್ಿಗಳು ಉತ್ತಮ ನಾಗರಿಕ ಆರಕ್ಷಕರಾಗಿ ಬೆಳೆಯಲು ಅಗತ್ಯ ತರಬೇತಿ ಮೂಲಕ ಸಜ್ಜುಗೊಳಿಸುವುದು. ಸಮಾಜದ ನಿಸ್ವಾರ್ಥ ಸೇವೆಗೆ ಸಜ್ಜುಗೊಳಿಸಲಾಗುವುದು ಇದರ ಉದ್ದೇಶವಾಗಿದೆ.
ಸಮಾರಂಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕೆ. ದೇವರಾಜ್ ಅವರು ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯರಾದ ಮಂಜುನಾಥ್ ಹಾಗೂ ದೈಹಿಕ ಶಿಕ್ಷಕಿ ಎಸ್.ಜಿ.ಭುವನೇಶ್ವರಿ ಅವರಿಗೆ ಎಸ್.ಪಿ.ಸಿ. ಕಿಟ್ನ್ನು ವಿತರಿಸಿದರು ಹಾಗೂ ವಿದ್ಯಾಥರ್ಿಗಳಿಗೆ ಸಿಹಿ ವಿತರಿಸಿದರು.ಅಂಚೆ ಇಲಾಖೆಯ ಸಹಾಯಕ ಅಧೀಕ್ಷಕರಾದ ಎನ್.ಜಿ.ಬಂಗೇಗೌಡ್ರ, ಜಿಲ್ಲಾ ಆಸ್ಪತ್ರೆಯ ಫಾಮರ್ಾಸಿಷ್ಟ್ ಬಸವರಾಜ ಮಲಗುಂದ, ಗಣ್ಯರಾದ ಶಂಕ್ರಪ್ಪ, ವಿಜಯಕುಮಾರ ಚಳ್ಳ, ವೃತ್ತ ಆರಕ್ಷಕ ನಿರೀಕ್ಷಕರಾದ ಸಂತೋಷ ಪವಾರ, ಶಿಗ್ಗಾವಿ ಕೆಎಸ್ಆರ್ಪಿ ಇನ್ಸ್ಪೇಕ್ಟರ್ ಎಲ್.ಜಿ.ನಾಯ್ಕ್, ಪೊಲೀಸ್ ತರಬೇತಿ ಶಿಕ್ಷಕರಾದ ಎನ್.ಬಿ ಮುರುಡೇಶ್ವರ ಇತರರು ಉಪಸ್ಥಿತರಿದ್ದರು.