ಜಮ್ಮುವಿನಲ್ಲಿ ಜೈಷ್ ಎ ಮೊಹಮದ್ ನ ಮೂವರು ಉಗ್ರರು ಹತ; ಶಸ್ತ್ರಾಸ್ತ್ರ, ಮದ್ದುಗುಂಡು ವಶ

ಜಮ್ಮು, ಜ 31,ನಗರದ ಹೊರವಲಯದಲ್ಲಿನ ನಾಗ್ರೋಟಾ ಬಳಿಯ ಬಾನ್ ಪ್ರದೇಶದ ಟೋಲ್ ಪ್ಲಾಜಾದಲ್ಲಿ ಶುಕ್ರವಾರ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಜೈಶ್-ಎ-ಮೊಹಮ್ಮದ್‍ನ ಮೂವರು ಭಯೋತ್ಪಾದಕರು ಹತರಾಗಿದ್ದು, ಓರ್ವ ಸೈನಿಕ ಗಾಯಗೊಂಡಿದ್ದಾರೆ.ಭಯೋತ್ಪಾದಕರನ್ನು ಹೊತ್ತೊಯ್ಯುತ್ತಿದ್ದ ವಾಹನದ ಚಾಲಕನನ್ನು ಬಂಧಿಸಲಾಗಿದ್ದು, ಗುಂಡಿನ ಚಕಮಕಿ ನಡೆದ ಸ್ಥಳದಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂರರಿಂದ ನಾಲ್ವರಿದ್ದ ಭಯೋತ್ಪಾದಕರ ತಂಡ ಶ್ರೀನಗರಕ್ಕೆ ತೆರಳುತ್ತಿದ್ದ ವೇಳೆ ಟೋಲ್ ಪ್ಲಾಜಾದಲ್ಲಿ ಪೆÇಲೀಸ್ ತಂಡ ಅವರನ್ನು ತಡೆದಿದೆ. ಇವರೆಲ್ಲ ಇತ್ತೀಚೆಗೆ ಒಳನುಸುಳಿದವರಾಗಿದ್ದು, ಶ್ರೀನಗರಕ್ಕೆ ತೆರಳುತ್ತಿದ್ದರು ಎಂದು ಜಮ್ಮು-ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.ಈ ಭಯೋತ್ಪಾದಕರು ಕಥುವಾ-ಹಿರಾನಗರ ಗಡಿಯ ಬಳಿಯ ದಯಾಲಚಕ್ ಪ್ರದೇಶದಿಂದ ಒಳನುಸುಳಿದ್ದಾರೆ ಎಂದು ಶಂಕಿಸಲಾಗಿದೆ. ಬಳಿಕ ಗುರುವಾರದಿಂದ ಅವರು ಟ್ರಕ್‍ನಲ್ಲಿ ಅಡಗಿಕೊಂಡಿದ್ದರು ಎಂದು ಡಿಜಿಪಿ ಹೇಳಿದ್ದಾರೆ.ಹೆಚ್ಚಿನ ವಿವರಗಳನ್ನು ಪಡೆಯಲು ಬಂಧಿತರನ್ನು ಪ್ರಶ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.‘ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಘಟನಾ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ಆರು ಎಕೆ ರೈಫಲ್ ಗಳು ಸೇರಿವೆ. ಶಸ್ತ್ರಾಸ್ತ  ಕಾಶ್ಮೀರ ಕಣಿವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರ ಭಯೋತ್ಪಾದಕರಿಗೆ ಸೇರಿದ್ದಾಗಿವೆ ಎಂದು ಭಾವಿಸಲಾಗಿದೆ. ಗುಂಡಿನ ಚಕಮಕಿಯಲ್ಲಿ ಮೂವರು ಭಯೋತ್ಪಾದಕರನ್ನು ಹತ್ಯೆಯಾಗಿದ್ದಾರೆ. ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಭಯೋತ್ಪಾದಕರ ಗುಂಪಿನಲ್ಲಿ ನಾಲ್ವರಿದ್ದಾಗಿ ಗೊತ್ತಾಗಿದೆ.’ ಎಂದು ಡಿಜಿಪಿ ತಿಳಿಸಿದ್ದಾರೆ ಟ್ರಕ್‍ನ ಚಾಲಕನನ್ನು ಅನಂತ್‍ನಾಗ್‍ನ ಮೊಹಮ್ಮದ್ ಮಕ್ಬೂಲ್ ವಾನಿ ಎಂದು ಗುರುತಿಸಲಾಗಿದೆ. ಚಾಲಕನೊಂದಿಗೆ ಕ್ಲೀನರ್ ನನ್ನೂ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.