ಸರ್ವ ಧರ್ಮಗಳಿಗೂ ಮಿಗಿಲಾದ ಸಂವಿಧಾನ ನಮ್ಮದು : ಅನಿತಾ ಜಕಬಾಳ
ಗದಗ 27 : ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಹಾಗೂ ಏಕತೆಯ ತತ್ವದಲ್ಲಿ ಸರ್ವಧರ್ಮಗಳಿಗೂ ಮಿಗಿಲಾದ ಧರ್ಮವನ್ನು ನಮ್ಮ ಸಂವಿಧಾನ ನಮಗೆ ನೀಡಿದೆ ಎಂದು ಅನಿತಾ ಜಕಬಾಳ ಅವರು ಹೇಳಿದರು.
ನಗರದ ಕರಿಯಮ್ಮ ದೇವಿ ಮಹಿಳಾ ಮಂಡಳ ಹಾಗೂ ಶ್ರೀ ಕನಕಾಮೃತ ವಾಹಿನಿಯ ಸಂಯುಕ್ತಾಶ್ರಯದಲ್ಲಿ ನೆರವೇರಿದ 76ನೇ ಗಣರಾಜ್ಯೋತ್ಸವದಲ್ಲಿ ಗಣರಾಜ್ಯೋತ್ಸವದ ಇತಿಹಾಸವನ್ನು ತಿಳಿಸುತ್ತಾ, ಸಂವಿಧಾನ ನಮಗೆ ಮೂಲಭೂತ ಹಕ್ಕುಗಳನ್ನು ನೀಡುವುದರ ಜೊತೆಗೆ ಕೆಲವು ಕರ್ತವ್ಯಗಳನ್ನು ತಿಳಿಸಿದೆ. ಅದರಂತೆ ನಾವು ಯಾವತ್ತು ಸಂವಿಧಾನವನ್ನು ಗೌರವಿಸಬೇಕು ಹಾಗೂ ಸಂವಿಧಾನಕ್ಕೆ ಚುತಿ ಬರೆದಂತೆ ಕಾಪಾಡಬೇಕು ಎಂದು ಅವರು ತಿಳಿಸಿದರು.
ಕನಕಾಮೃತವಾಹಿನಿಯ ಅಧ್ಯಕ್ಷರಾದ ಎಂ. ಎನ್. ಕಾಮನಹಳ್ಳಿ ಅವರು ಈ ವರ್ಷ 'ಸುವರ್ಣ ಭಾರತ, ಪರಂಪರೆ ಹಾಗೂ ಅಭಿವೃದ್ಧಿ' ಎಂಬ ಧ್ಯೇಯೋದ್ದೇಶದೊಂದಿಗೆ ದೇಶಾದ್ಯಂತ ಗಣತಂತ್ರವನ್ನು ಆಚರಿಸಲಾಗುತ್ತಿದೆ ಎಂದು ವಿವರಿಸಿದರು.ಶ್ರೀ ಕರಿಯಮ್ಮ ದೇವಿ ಮಹಿಳಾ ಮಂಡಳದ ಅಧ್ಯಕ್ಷರಾದ ರೇಣುಕಾ ಕೇಸರಿ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಡಾ.ಎನ್. ಎಂ.ಅಂಬಲಿಯವರು ನಿರೂಪಿಸಿದರು. ತನುಜಾ ಗೋವಿಂದಪ್ಪನವರ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಎಚ್.ಎಸ್.ಕುರಿ, ಆರ್.ಬಿ.ಅಂದಪ್ಪನವರ, ರತ್ನಾ ಮನ್ನಾಪೂರ, ಲಕ್ಷ್ಮವ್ವ ಕುರಿ, ಗೊರವರ, ಎಸ್. ವೈ. ಕೊಪ್ಪದ, ಎಚ್. ಎಸ್. ಕಿಂದ್ರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.