ಎಲೆಕ್ಟ್ರಾನಿಕ್ ಮಿಡಿಯಾ ಜರ್ನಲಿಸ್ಟ್ ಅಸೊಸಿಯೇಷನ್ ಚಿಕ್ಕೋಡಿ ಘಟಕದ ಪದಾಧಿಕಾರಿಗಳ ಆಯ್ಕೆ

Election of office bearers of Electronic Media Journalists Association Chikkodi unit

ಬೆಳಗಾವಿ : ಎಲೆಕ್ಟ್ರಾನಿಕ್ ಮಿಡಿಯಾ ಜರ್ನಲಿಸ್ಟ್ ಅಸೊಸಿಯೇಷನ್ ಚಿಕ್ಕೋಡಿ ಘಟಕದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

  ಬೆಳಗಾವಿಯ ಕನ್ನಡ ಸಾಹಿತ್ಯ ಭವ‌‌ನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

  ಜರ್ನಲಿಸ್ಟ್ ಅಸೊಸಿಯೇಷನ್ ನ ಗೌರವ ಅಧ್ಯಕ್ಷರಾಗಿ ಬೆಳಗಾವಿಯ ನ್ಯೂಸ್ ಫಸ್ಟ್ ಹಿರಿಯ ವರದಿಗಾರ ಶ್ರೀಕಾಂತ್ ಕುಬಕಡ್ಡಿ, ಅಧ್ಯಕ್ಷರಾಗಿ ಚಿಕ್ಕೋಡಿಯ ಪವರ್ ಟಿವಿ ವರದಿಗಾರ ಸಿದ್ದೇಶ ಪುಟಾಣೆ, ಉಪಾಧ್ಯಕ್ಷ ರಾಗಿ ಗ್ಯಾರಂಟಿ ನ್ಯೂಸ್ ಉತ್ತರ ಕರ್ನಾಟಕ ಹೆಡ್  ಅಜಿತ್ ಸಣ್ಣಕ್ಕಿ, ಪ್ರಧಾನ ಕಾರ್ಯದರ್ಶಿಯಾಗಿ ಆರ್. ಕನ್ನಡ ವರದಿಗಾರ ಸಂಜೀವ ಅರಭಾವಿ, ಸಹ ಕಾರ್ಯದರ್ಶಿಯಾಗಿ ಚಿಕ್ಕೋಡಿಯ ನ್ಯೂಸ್ ಫಸ್ಟ್ ವರದಿಗಾರ ಸಂಜಯ ಕೌಲಗಿ, ಖಜಾಂಚಿಯಾಗಿ ಚಿಕ್ಕೋಡಿ ಗ್ಯಾರಂಟಿ ನ್ಯೂಸ್ ವರದಿಗಾರ ದುರದುಂಡಯ್ಯ ಹಿರೇಮಠ ಇವರುಗಳು ಆಯ್ಕೆಯಾಗಿದ್ದಾರೆ.

     ಇನ್ನಿತರ ಎಲ್ಲ ವರದಿಗಾರರು, ಕ್ಯಾಮರಾಮನ್ ಗಳು ಚಿಕ್ಕೋಡಿ ಘಟಕದ ಪದಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಸಭೆಯಲ್ಲಿ ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮಿಡಿಯಾ ಜರ್ನಲಿಸ್ಟ್ ಅಸೊಸಿಯೇಷನ್ ಗೌರವಾಧ್ಯಕ್ಷ ಶ್ರೀಕಾಂತ ಕುಬಕಡ್ಡಿ, ಜಿಲ್ಲಾಧ್ಯಕ್ಷ ಮಂಜುನಾಥ ಪಾಟೀಲ್, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಸುಗಂಧಿ, ಸಹ ಕಾರ್ಯದರ್ಶಿ ಶ್ರೀಧರ ಕೊಟಾರಗಸ್ತಿ, ಸದಸ್ಯರಾದ ಸಂತೋಷ ಶ್ರೀರಾಮುಡು, ಸಹದೇವ ಮಾನೆ, ಮೈಲಾರಿ ಪಟಾತ, ಸಿದ್ದನಗೌಡ ಪಾಟೀಲ, ರಾಜೇಶ ಹೂಗಾರ, ಪ್ರಹ್ಲಾದ ಪೂಜೇರಿ, ಅಡಿವೆಪ್ಪ ಪಾಟೀಲ ಅವರ ಉಪಸ್ಥಿತಿಯಲ್ಲಿ ಚಿಕ್ಕೋಡಿ ಘಟಕದ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.