ಸಂಗೀತ ಕಲೆ ಅತ್ಯಂತ ಶ್ರೇಷ್ಠ: ಮಣಿಪ್ರಸಾದ

ಧಾರವಾಡ 04: ಭಾರತೀಯ ಸಾಂಸ್ಕೃತಿಕ ಕಲಾ ಪರಂಪರೆಯಲ್ಲಿ ಒಂದಾದ ನಮ್ಮ ಶಾಸ್ತ್ರೀಯ ಸಂಗೀತ ಕಲಾ ಪ್ರಕಾರವೂ ಅತ್ಯಂತ ಶ್ರೇಷ್ಠ ಕಲೆಯಾಗಿದ್ದು, ಇದರ ಶಕ್ತಿ ಅಪಾರವಾಗಿದೆ. ನಾಡಿನ ಹೆಸರಾಂತ ಕಲಾವಿದರಾದ ಪಂಡಿತ ಭೀಮಸೇನ ಜೋಶಿ, ಪಂಡಿತ ಬಸವರಾಜ ರಾಜಗುರು, ಪಂಡಿತ ಮಲ್ಲಿಕಾಜರ್ುನ ಮನಸೂರ, ಮತ್ತು ಡಾ. ಗಂಗುಬಾಯಿ ಹಾನಗಲ್ ಅವರಂತೆ ಅನೇಕ ಹಿರಿಯ ಕಲಾವಿದರು ಈ ಶಾಸ್ತ್ರೀಯ ಸಂಗೀತದ ಪ್ರಕಾರವನ್ನು ಉಳಿಸಿ ಬೆಳೆಸುವಲ್ಲಿ ಅತ್ಯಂತ ಶ್ರಮಿಸಿದ್ದಾರೆ ಎಂದು ಅಂತರಾಷ್ಟ್ರೀಯ ಖ್ಯಾತಿಯ ಹಿರಿಯ ಶಾಸ್ತ್ರಿಯ ಹಿಂದೂಸ್ತಾನಿ ಗಾಯಕ ಪಂಡಿತ ಮಣಿಪ್ರಸಾದ ಅವರು ಹೇಳಿದರು.

ಕನ್ನಡ ಕುಲಪುರೋಹಿತ ಆಲೂರ ವೆಂಕಟರಾವ್ ಸಭಾ ಭವನದಲ್ಲಿ ದಿ. 02ರಂದು ಬೆಳಗ್ಗೆ 10:30ಕ್ಕೆ ತಬಲಾ ವಾದ್ಯವನ್ನು ನುಡಿಸುವುದರ ಮೂಲಕ ಮಕ್ಕಳ ಹಬ್ಬ 2018ನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಆಧುನಿಕತೆಯ ಭರಾಟೆಯಲ್ಲಿ ಶಾಸ್ತ್ರೀಯ ಸಂಗೀತ ಪ್ರಕಾರಗಳಲ್ಲಿ ಇಂದಿನ ಯುವ ಜನತೆಗೆ ಆಸಕ್ತಿಯ ಕೊರತೆ ಉಂಟಾಗಿದ್ದು, ಆ ನಿಟ್ಟಿನತ್ತ ಶೈಕ್ಷಣಿಕ ಮಟ್ಟದಲ್ಲಿ ಪ್ರಾಥಮಿಕ ಹಂತದಿಂದ ಉನ್ನತ ಶೈಕ್ಷಣಿಕ ಮಟ್ಟದವರೆಗೆ ಸಂಗೀತ ಅಭ್ಯಾಸ ವಿದ್ಯಾಥರ್ಿಗಳಿಗೆ ನೀಡುವುದು ಅವಶ್ಯವಿದೆ ಎಂದರು. 

ಮುಖ್ಯ ಅತಿಥಿಗಳಾಗಿ ಉತ್ತರ ಕನರ್ಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಶಂಕರ ಸುಗತೆ ಅವರು ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಅವುಗಳ ಮೂಲಕ ಸಾಮಾಜಿಕ ಸಮಸ್ಯೆಗಳ ಕುರಿತು ಅರಿವು ಮೂಡಿಸುವುದು ನಮ್ಮೆಲ್ಲ ಕಲಾವಿದರ ಕರ್ತವ್ಯವಾಗಿದೆ. ಬರುವ ದಿನಗಳಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯ ವತಿಯಿಂದ ಚಲನಚಿತ್ರ ಕಲಾವಿದರ ಸಹಕಾರದೊಂದಿಗೆ ಮಕ್ಕಳಿಗಾಗಿಯೇ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಲು ನಿರ್ಧರಿಸಿದ್ದೇವೆಂದರು.

ಲೋಕೊಪಯೋಗಿ ಇಲಾಖೆಯ ನಿವೃತ್ತ ಅಭಿಯಂತರ ಎಮ್.ಎಸ್ ಫರಾಸ್ರವರು ಇಂದಿನ ಚಲನಚಿತ್ರಗಳಲ್ಲಿ ವಾಣಿಜ್ಯಕ್ಕೆ ಮೀಸಲಾಗುವುದನ್ನು ಬಿಟ್ಟು, ಹೆಚ್ಚು ಮಕ್ಕಳ ಮನೋವಿಕಾಸಕ್ಕೆ ಪೂಕರವಾಗುವಂತಹ ಚಲನಚಿತ್ರಗಳು ಮೂಡಿಬರಬೇಕಾಗಿವೆ. ಹಾಗೆಯೇ ಕಿರುತೆರೆಯಲ್ಲಿ ಈಗಾಗಲೇ ಹಲವಾರು ಕಾರ್ಯಕ್ರಮಗಳು ಬಿತ್ತರಿಸುತ್ತಿದ್ದು, ಮಕ್ಕಳ ಶ್ರೇಯೊಭಿವೃದ್ಧಿಗಾಗಿ ಇಂದಿನ ಈ ಮಕ್ಕಳ ಹಬ್ಬ ಸಹಕಾರಿಯಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ ರೈಸಿಂಗ್ ಸ್ಟಾರ್ಸ ಸಂಸ್ಥೆಯ ನಿದರ್ೇಶಕ ಡಾ. ಪ್ರಕಾಶ ಮಲ್ಲಿಗವಾಡ ಅವರು ಹಲವಾರು ವರ್ಷಗಳಿಂದ ಮಕ್ಕಳಿಗಾಗಿ ಸಂಗೀತ, ನೃತ್ಯ, ನಾಟಕ ಹಾಗೂ ವಿವಿಧ ಕಲಾ ಪ್ರಕಾರಗಳ ತರಬೇತಿಗಳನ್ನು ಸಂಸ್ಥೆಯ ವತಿಯಿಂದ ಏರ್ಪಡಿಸುತ್ತಿದ್ದು, ಈ ಕಾರ್ಯಕ್ರಮ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳಿಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಏರ್ಪಡಿಸಿದ್ದು, ವಿಶೇಷವಾಗಿ ನಗರದ ವಿದ್ಯಾಥರ್ಿಗಳ ಜೊತೆಗೆ ಗ್ರಾಮೀಣ ಭಾಗದ ವಿದ್ಯಾಥರ್ಿಗಳು ಅಲ್ಲದೇ ಬುದ್ಧಿಮಾಂದ್ಯ ಮಕ್ಕಳೂ ಕೂಡಾ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಮುಂದಿನ ದಿನಗಳಲ್ಲಿ ಯುವ ಜನತೆಗೆ ಹಾಗೂ ಕಾಲೇಜು ವಿದ್ಯಾಥರ್ಿಗಳಿಗಳೊಂದಿಗೆ ರಾಜ್ಯ ಮಟ್ಟದ ಕಲಾತಂಡಗಳ ಸಾಂಸ್ಕೃತಿಕ ಪ್ರದರ್ಶನವನ್ನು ಪ್ರತಿಬಿಂಬಿಸುವ 2 ದಿನಗಳ ರಾಜ್ಯ ಮಟ್ಟದ ಸಾಂಸ್ಕೃತಿಕ ಕಲಾ ಮೇಳ ಬೃಹತ್ ಕಾರ್ಯಕ್ರಮವನ್ನು ಏರ್ಪಡಿಸಲಿದ್ದೇವೆ ಎಂದರು.  

ನಿವೃತ್ತ ಸೈನ್ಯಾಧಿಕಾರಿಗಳಾದ ಡಿ.ಬಿ ಚಕ್ರಸಾಲಿ, ಕನರ್ಾಟಕ ಕೊಂಕಣಿ ಅಕಾಡೆಮಿಯ ಸದಸ್ಯ ಸಂತೋಷ ಮಹಾಲೆ, ಪಂಡಿತ ಬಸವರಾಜ ಮನಸೂರ ಟ್ರಸ್ಟನ ಅಧ್ಯಕ್ಷ ಶಿವಾನಂದ ಅಮರಶೆಟ್ಟಿ, ಚುಟುಕು ಸಾಹಿತ್ಯ ಪರಿಷತ್ತ ಅಧ್ಯಕ್ಷ ವಾಯ್. ಬಿ ಬೀಳಗಿ ಹಾಗೂ ಇತರರು ಉಪಸ್ಥಿತರಿದ್ದರು. 

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾಥರ್ಿಗಳಿಗೆ "ಪ್ರತಿಭಾ ಶ್ರೀ" ಹಾಗೂ "ರಂಗ ವೈಭವ" ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚಿತ್ರಕಲಾ ಸ್ಪಧರ್ೆ ಹಾಗೂ ಛದ್ಮವೇಶ ಸ್ಪಧರ್ೆಯಲ್ಲಿ ವಿಜೇತರಾದ  ವಿದ್ಯಾಥರ್ಿಗಳಿಗೆ ಕೂಡಾ ಬಹುಮಾನ ವಿತರಿಸಲಾಯಿತು. 

ಉದ್ಘಾಟನಾ ಸಮಾರಂಭಕ್ಕಿಂತ ಪೂರ್ವದಲ್ಲಿ ಚಿತ್ರಕಲೆ ಹಾಗೂ ಛದ್ಮವೇಷ ಸ್ಪಧರ್ೆಯನ್ನು ಸ್ಟಾರ್ ಸಿಂಗರ್ಸ ಅವಾರ್ಡ ಪ್ರಶಸ್ತಿ ಪುರಸ್ಕೃತ ಮಹನ್ಯ ಜಿ ಪಾಟೀಲ ಸಂಬಾಳ ವಾದ್ಯವನ್ನು ಭಾರಿಸುವುದರ ಮೂಲಕ ಚಾಲನೆ ನೀಡಿದಳು. ನಂತರ ವಿವಿಧ ಮಕ್ಕಳ ಕಲಾ ತಂಡಗಳಿಂದ ಸಂಗೀತ, ನೃತ್ಯ, ಜಾನಪದ ವಾದ್ಯಗೋಷ್ಠಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಾಯ್. ಬಿ. ಜಾಲಗಾರ ಸ್ವಾಗತಿಸಿದರು. ಸಂತೋಷ ಸಾಲಿಯಾನ ನಿರೂಪಣೆ, ವಂದಣಾರ್ಪಣೆ ಪ್ರವೀಣ ಬಡಿಗೇರ ಮಾಡಿದರು.